” ಕೋವಿಡ್ ಯೋಧರು “

ಕೋವಿಡ್ ಯೋಧರು

ಬಹುಶಹಃ ಇಡೀ ಪ್ರಪಂಚವನ್ನೇ ಶತಮಾನದಲ್ಲೇ ತಲ್ಲಣಗೊಳಿಸಿದ, ಜನ ಜೀವನವನ್ನೇ ಬುಡಮೇಲು ಮಾಡುತ್ತಿರುವ ಮಾನವರ ವ್ಯವಸ್ಥೆಯ ಮೇಲೆ ತಾಂಡವವಾಡುತ್ತಿರುವ, ಕಣ್ಣಿಗೆ ಕಾಣದ ಸೂಕ್ಷ್ಮನು ಜೀವಿ ಕೋವಿಡ್ ವೈರಸ್ ಅಥವಾ ಕೊರೊನ ವೈರಸ್ ಎಂಬುದೇ ಇಡೀ ಜಗತ್ತಿನಲ್ಲಿ ಬಹುವಾಗಿ ಕಾಡುತ್ತಿರುವ ವಿಷಯವಾಗಿದೆ.

ಕೋವಿಡ್ ಎಂಬ ಶಬ್ದವನ್ನೇ ಕೇಳಿದರೆ ಬೆಚ್ಚಿ ಬೀಳುತ್ತಾರೆ .ಯಾರಾದರೂ ಸೀನಿದರೆ,ಕೆಮ್ಮಿದರೆ ಮಾರು ದೂರ ಓಡಿಹೋಗುತಿರುವರು . ಸಂಧರ್ಭದಲ್ಲಿ ಕೋವಿಡ್ ನಿಯಂತ್ರಣಕ್ಕೆ ಹಗಲಿರುಳು ತಮ್ಮ ಪ್ರಾಣವನ್ನೇ ಮುಡುಪಾಗಿಟ್ಟು ಶ್ರಮಿಸುತ್ತಿರುವ ನಮ್ಮ ಕೋವಿಡ್ , ಎಲ್ಲರಿಗೂ ಆದರ್ಶರಲ್ಲವೇ.ಅವರ ಶ್ರಮಕ್ಕೆ ಬೆಲೆ ಕಟ್ಟುವುದಕಾಗುತ್ತದೆಯೇ? ಖಂಡಿತ ಇಲ್ಲ. ನಮ್ಮ ಸರ್ಕಾರದ ಹಲವಾರು ಇಲಾಖೆಗಳ ನೌಕರರು ಹಾಗು ಅಧಿಕಾರಿಗಳು ಕಾವಿಡ್ ನಿರ್ಮೂಲನೆಗೆ ಅಥವಾ ನಿಯಂತ್ರಣಕ್ಕೆ ಹಗಲಿರುಳು ಶ್ರಮಿಸುತಿದರ .ಜನರನ್ನು ನಿಯಂತ್ರಿಸುವಲ್ಲಿ,ಅಂತರವನ್ನು ಕಾಪಾಡುವಲ್ಲಿ,ಲೊಕ್ಡೌನ್,ಸೀಲ್ಡೌನ್  ಮಾಡುವಲ್ಲಿ,ಸ್ಯಾನಿಟೈಝಷನ್ ಮುಖಾಂತರ ಕಾರೋನ ನಿಯಂತ್ರಿಸುವಲ್ಲಿ ಅವರ ಶ್ರಮ, ಬದ್ಧತೆಗೆ, ಭಾರತೀಯರಾದ ನಾವು ಎಂದೆಂದಿಗೂ ಚಿರಋಣಿಗಳಾಗಿರುತೇವೆ.

ನಮ್ಮ ವೈದ್ಯಕೀಯ ವ್ಯವಸ್ಥೆಯಾ ಯೋಧರಂತುಪ್ರತಿದಿನ ತಮ್ಮ ಮನೆಗಳನ್ನು ಬಿಟ್ಟು ಪಿ.ಪಿ. ಕಿಟ್ ಧರಿಸಿರೋಗಿಗಳ ಆರೈಕೆ ಮಾಡುವುದನ್ನು ನೋಡಿದರೆ ನಮಗೆ ಅವರೇ ಭಗವಂತನೇನೋ ಅನ್ನುವಂತೆ ಕಾಣುತಾರೆ.

ನೀವು ಊಹಿಸಿಕೊಳ್ಳಿ ಔಷಧಿಇಲ್ಲದ ಕಾಯಿಲೆಇಂದ ನರಳುತ್ತಿರುವ ರೋಗಿಗಳನ್ನು ಮನುಷ್ಯರ ಶುಶ್ರುಷೆ ಮಾಡುತ್ತಿರುವುದನ್ನು ನೋಡಿದಾಗ ನಮಗೆಲ್ಲರಿಗೂ ಕೈ ಮುಗಿಯಬೇಕೆನಿಸುವುದು . ಸಹಜವಾಗಿದೆ. ಟಿ.ವಿಯಲ್ಲಿ ಅಂತಹ ದೃಶ್ಯಗಳನ್ನೂ ನೋಡಿದಾಗ ಮನೆಯಲ್ಲಿರುವ ಹಿರಿಯರು,ಬುದ್ದಿಜೀವಿಗಳು ಕೈಮುಗಿಯುತ್ತಿರುವುದು ಸಾಮಾನ್ಯ ದೃಶ್ಯವಾಗಿದೆ.

NAME: SAI PRARTHANA

SCHOOL: PRUDENCE INTERNATIONAL SCHOOL

STANDARD: 6TH

 

Leave a Reply

CLEAN CITY: TUMAKURU

November 11, 2020

CYCLING: A MEMORY OF CHILDHOOD

November 11, 2020

Leave a Reply