Kannada Books
Showing 1111–1140 of 1160 results
ಸುಕ್ರಿಬೊಮ್ಮಗೌಡ
ಆಧುನಿಕ ಸಮಾಜ ಶಾಸ್ತ್ರಜ್ಞರು ಗುರುತಿಸಿರುವಂತಹ ಬುಡಕಟ್ಟು ಸಂಸ್ಕೃತಿಯ ಬಹುಪಾಲು ಲಕ್ಷಣಗಳನ್ನು ಇಂದಿನವರೆಗೂ ಉಳಿಸಿಕೊಂಡು ಉತ್ತರ ಕನ್ನಡ ಜಿಲ್ಲೆಯ ಕಾರವಾರ ಅಂಕೋಲಾ, ಕುಮುಟಾ, ಹೊನ್ನಾವರ ತಾಲ್ಲೂಕುಗಳಲ್ಲಿ ನೆಲೆಸಿರುವ
ಆಧುನಿಕ ಸಮಾಜ ಶಾಸ್ತ್ರಜ್ಞರು ಗುರುತಿಸಿರುವಂತಹ ಬುಡಕಟ್ಟು ಸಂಸ್ಕೃತಿಯ ಬಹುಪಾಲು ಲಕ್ಷಣಗಳನ್ನು ಇಂದಿನವರೆಗೂ ಉಳಿಸಿಕೊಂಡು ಉತ್ತರ ಕನ್ನಡ ಜಿಲ್ಲೆಯ ಕಾರವಾರ ಅಂಕೋಲಾ, ಕುಮುಟಾ, ಹೊನ್ನಾವರ ತಾಲ್ಲೂಕುಗಳಲ್ಲಿ ನೆಲೆಸಿರುವ
ಸುಡುಗಾಡು ಸಿದ್ಧ
ಸಮಾಜಶಾಸ್ತ್ರಜ್ಞರು, ಮಾನವಶಾಸ್ತ್ರಜ್ಞರು, ಜನಪದ ತಜ್ಞರು ಹೀಗೆ ನಾನಾ ನಮೂನೆಯ ವಿದ್ವಾಂಸರು ಹಿಂದಿನಿಂದಲೂ ಸಮುದಾಯಗಳ ಅಧ್ಯಯನಗಳನ್ನು ನಡೆಸುತ್ತಲೇ ಬಂದಿದ್ದಾರೆ. ಈ ವಿದ್ವಾಂಸರ ಅಧ್ಯಯನಗಳಲ್ಲಿ ಯಾವುದೋ ಒಂದು ಕೊರತೆಯಂತೂ ಕಂಡುಬರುತ್ತದೆ. ಎಷ್ಟೋ ಬಾರಿ ವಿದ್ವಾಂಸರಿಗೆ ಮಾಹಿತಿ ನೀಡುವಾಗ ಸಮುದಾಯದ ಮಾಹಿತಿದಾರರು ಸಂಕೋಚಪಟ್ಟು ಮಾಹಿತಿಗಳನ್ನು ಪೂರ್ಣವಾಗಿ ಕೊಡದೇ ಹೋಗುವ ಸಾಧ್ಯತೆಗಳಿರುತ್ತವೆ.
ಸುವರ್ಣ ಕರ್ನಾಟಕ ರಾಜಕೀಯ ಸಿಂಹಾವಲೋಕನ
ಭಾರತ ೧೯೪೭ರ ಆಗಸ್ಟ್ ೧೫ರಂದು ಸ್ವತಂತ್ರವಾಯಿತೇನೋ ನಿಜ. ಆದರೆ ಮೈಸೂರು ಸಂಸ್ಥಾನ ಮಾತ್ರ ‘ಪ್ರಭುತ್ವ’ದಿಂದ ‘ಪ್ರಜಾಪ್ರಭುತ್ವ’ಕ್ಕೆ ಪರಿವರ್ತನೆಗೊಳ್ಳಲು ಒಂದೆರಡು ತಿಂಗಳು ಕಾಯಬೇಕಾಯಿತು.
ಭಾರತ ೧೯೪೭ರ ಆಗಸ್ಟ್ ೧೫ರಂದು ಸ್ವತಂತ್ರವಾಯಿತೇನೋ ನಿಜ. ಆದರೆ ಮೈಸೂರು ಸಂಸ್ಥಾನ ಮಾತ್ರ ‘ಪ್ರಭುತ್ವ’ದಿಂದ ‘ಪ್ರಜಾಪ್ರಭುತ್ವ’ಕ್ಕೆ ಪರಿವರ್ತನೆಗೊಳ್ಳಲು ಒಂದೆರಡು ತಿಂಗಳು ಕಾಯಬೇಕಾಯಿತು.
ಹಕ್ಕಿಪಿಕ್ಕಿ
ಹಕ್ಕಿಪಿಕ್ಕಿ ಎಂಬ ಹೆಸರು ಇವರ ಸಾಂಪ್ರದಾಯಿಕ ಕಸುಬು ಹಕ್ಕಿಗಳನ್ನು ಹಿಡಿಯುವುದರಿಂದ ಬಂದಿರುವುದು. ಹಕ್ಕಿಪಿಕ್ಕಿ ಕನ್ನಡದ ಜೋಡಿನುಡಿ. ಹಕ್ಕಿ ಎಂದರೆ ಪಕ್ಷಿ ಎಂದರ್ಥ. ಪಿಕ್ಕಿ ಅದರ ಪ್ರತಿಧ್ವನಿ ರೂಪ. ಕಿಟಲ್ ನಿಘಂಟಿನಲ್ಲಿ ‘ಹಕ್ಕಿಯನ್ನು ಹೆಕ್ಕ’ ಎಂಬ ಅರ್ಥದಿಂದ ನಿಷ್ಪನ್ನವಾಗಿದೆ. ಇವರು ರಾಜಸ್ಥಾನ, ಗುಜರಾತ ಮೂಲದಿಂದ ಆಂಧ್ರಪ್ರದೇಶ ಮಾರ್ಗವಾಗಿ ಕರ್ನಾಟಕಕ್ಕೆ ವಲಸೆ ಬಂದು ನೆಲೆನಿಂತಿರುವರು.
ಹಬ್ಬದ ಹಾಡುಗಳು(ಸಂಪುಟ-೨)
1. ಗಂಗಿ ಗೌರೀ ಹಾಡು ಗಂಗಿನ ತರಬೇಕಂತ ನಂದಿನ ಸೃಂಗಾರ ಮಾಡಿ || ಕೊಂಬಣಸ ಕೊರಳs ಹುಲಗೆಜ್ಜೆ | ಕೋಲ || 1 || ಕೊಂಬುs ಅಣಸ ಕೊರಳ ಹುಲಗೆಜ್ಜಿ ಶಿವರಾಯಾ || ಗಂಗಿsನ ತರವೋs ನಡದಾರ | ಕೋ || 2 || ಹಳ್ಳsದ ದಂಡಿsಗಿ ಹೂವ ಕೋವೂ ಜಾಣಿ | ಲಿಂಗಕೊಂದ್ಹೊವs ದಯಮಾಡ | ಕೋ || 3 || ಲಿಂಗಕೊಂದ್ಹೊವs ದಯಮಾಡಿದ್ರ ಮಾಡೇನ || ನಮ್ಮವ್ವ ನಮಗs ಬೈದಾಳ | ಕೋ || 4 || ಹಳ್ಳsದ ದಂಡಿsಗಿ ಹೂವ ಕೋವೂ ಜಾಣಿ || ಲಿಂಗಕ್ಕೆರಡ್ಹೊವs ದಯಮಾಡ | ಕೋ || 5 ||
ಹಮ್ಮು-ಬಿಮ್ಮು
ಒಬ್ಬೊಂಟಿಗನಾದ ಮನುಷ್ಯನಿಗೆ-ಅದರಲ್ಲಿಯೂ ಅವನು ಶ್ರೀಮಂತನಾಗಿದ್ದರೆ-ಹೆಂಡತಿಯೊಬ್ಬಳ ಅವಶ್ಯಕತೆಯಿದೆಯೆನ್ನುವುದು ಸರ್ವಸಮ್ಮತವಾದ ಸತ್ಯವಾಗಿದೆ. ಅವನು ನೆರೆಗೆ ಬಂದು ನೆಲಸಿದ ಮೊದಲು ಅವನ ಮನೋಭಾವವಾಗಲಿ ಅಭಿಪ್ರಾಯವಾಗಲಿ ಅಕ್ಕಪಕ್ಕದವರಿಗೆ ಸಾಕಷ್ಟು ತಿಳಿದಿರುವುದಿಲ್ಲ. ಆದರೂ ಅವನು ತಮ್ಮ ಹೆಣ್ಣುಮಕ್ಕಳಲ್ಲೊಬ್ಬರ ಕೈಹಿಡಿಯಬೇಕೆಂಬುದು ಅಕ್ಕಪಕ್ಕದ ಮನೆಯವರ ಮನಸ್ಸಿನಲ್ಲಿ ಆಳವಾಗಿ ಬೇರೂರಿರುತ್ತದೆ.

ಹರ್ಮನ್ ಹೆಸ್
‘ಕೇಳಿಲ್ಲಿ’ ನನ್ನ ತಂದೆ ದಂತದ ಒಂದು ಸಣ್ಣ ಕೊಳಲನ್ನು ಕೊಡುತ್ತಾ ಹೇಳಿದರು. ‘ಇದನ್ನ ತೆಗೆದುಕೊ, ಹೊರದೇಶಗಳಲ್ಲಿ ಊದುತ್ತಾ ಜನರನ್ನು ರಂಜಿಸುವಾಗ ನಿನ್ನ ಈ ವೃದ್ಧ ತಂದೆಯನ್ನು ಮರೆಯಬೇಡ.
‘ಕೇಳಿಲ್ಲಿ’ ನನ್ನ ತಂದೆ ದಂತದ ಒಂದು ಸಣ್ಣ ಕೊಳಲನ್ನು ಕೊಡುತ್ತಾ ಹೇಳಿದರು. ‘ಇದನ್ನ ತೆಗೆದುಕೊ, ಹೊರದೇಶಗಳಲ್ಲಿ ಊದುತ್ತಾ ಜನರನ್ನು ರಂಜಿಸುವಾಗ ನಿನ್ನ ಈ ವೃದ್ಧ ತಂದೆಯನ್ನು ಮರೆಯಬೇಡ.
ಹಸಿಮಾಂಸ ಮತ್ತು ಹದ್ದುಗಳು
ಮೂಡಲ ದಿಕ್ಕಿನಲ್ಲಿ ತಲೆಯೆತ್ತಿ ಬೆಂಕಿಯುಂಡೆಯಂತೆ ಬಂದ ಸೂರ್ಯ ಬಿಳುಪಿಗೆ ತಿರುಗಿ ಸೊಕ್ಕೇರಿದ ಬಿಳಿ ಗೂಬೆಯಂತೆ ಗುಟುರು ಹಾಕುತ್ತ, ನೀಲಿ ಆಕಾಶದ ಉದ್ದಕ್ಕೂ ಕುಣಿಯುತ್ತ ಮೆರೆದು ಕೊನೆಗೂ ಪಡುವಣಕ್ಕಿಳಿದು,
ಮೂಡಲ ದಿಕ್ಕಿನಲ್ಲಿ ತಲೆಯೆತ್ತಿ ಬೆಂಕಿಯುಂಡೆಯಂತೆ ಬಂದ ಸೂರ್ಯ ಬಿಳುಪಿಗೆ ತಿರುಗಿ ಸೊಕ್ಕೇರಿದ ಬಿಳಿ ಗೂಬೆಯಂತೆ ಗುಟುರು ಹಾಕುತ್ತ, ನೀಲಿ ಆಕಾಶದ ಉದ್ದಕ್ಕೂ ಕುಣಿಯುತ್ತ ಮೆರೆದು ಕೊನೆಗೂ ಪಡುವಣಕ್ಕಿಳಿದು,
ಹಾಸನ ಜಿಲ್ಲಾ ರಂಗಮಾಹಿತಿ
ಹಾಸನ ಜಿಲ್ಲೆ ಭೌಗೋಳಿಕವಾಗಿ ಮೂರು ಭಿನ್ನ ವಾತಾವರಣದ ಜಿಲ್ಲೆ. ಪಶ್ಚಿಮಕ್ಕೆ ಘಟ್ಟಗಳಿಗೆ ಆತಿಕೊಂಡಂತಿರುವ ಮಲೆನಾಡು, ಪೂರ್ವಕ್ಕೆ ವ್ಯಾಪಿಸಿರುವ ಅರೆಮಲೆನಾಡು ಮತ್ತು ಬಯಲುನಾಡು. ಅತ್ತ ಮಲೆನಾಡಿಗೆ ಧಾರಾಕಾರವಾಗಿ ಬೀಳುವ ಮಳೆ. ಬಯಲು ನಾಡಲ್ಲಿ ಬೆಳೆ ಇಲ್ಲದೆ ಹಪಹಪಿಸುವ ಬಯಲು ಸೀಮೆಯ ಜನ. ಜಿಲ್ಲೆಯ ವಿಶಿಷ್ಟ ಮಣ್ಣಿನ ರಚನೆಯಿಂದಾಗಿ ಆಹಾರ, ಬೆಳೆಗಳ, ವಾಣಿಜ್ಯ ಬೆಳೆಗಳ ತವರು.