Showing 10351–10380 of 10484 results

ಶಾಲ್ಮಲಾ ನನ್ನ ಶಾಲ್ಮಲಾ

೧.ಉಳಿದ ನದಿಗಳ ಹಾಗೆ ಉಳಿದ ನದಿಗಳು ಹುಟ್ಟುತ್ತವೆ ಒಂದು ಕಡೆ ಹರಿಯುತ್ತವೆ ಒಂದು ಕಡೆ ಕೂಡುತ್ತವೆ ೧.ಉಳಿದ ನದಿಗಳ ಹಾಗೆ ಉಳಿದ ನದಿಗಳು ಹುಟ್ಟುತ್ತವೆ ಒಂದು ಕಡೆ ಹರಿಯುತ್ತವೆ ಒಂದು ಕಡೆ ಕೂಡುತ್ತವೆ

ಶಾಸ್ತ್ರ ಕುತೂಹಲ

‘ವಿಕ್ರಮಾರ್ಜುನ ವಿಜಯ’ದಲ್ಲಿ ‘ಮಂಗಳಮಹಾಶ್ರೀಯಂ ಜಯಶ್ರೀಯುಮಂ’ ಎಂದು ಮುಕ್ತಾಯವುಳ್ಳ ‘ವಿಕ್ರಮಾರ್ಜುನ ವಿಜಯ’ದಲ್ಲಿ ‘ಮಂಗಳಮಹಾಶ್ರೀಯಂ ಜಯಶ್ರೀಯುಮಂ’ ಎಂದು ಮುಕ್ತಾಯವುಳ್ಳ

ಶಿಕ್ಷಣ ಮತ್ತು ಕ್ರೀಡೆ

ನಮ್ಮ ರಾಜ್ಯದಲ್ಲಿ ಪ್ರಾಚೀನ ಶಿಕ್ಷಣ ಸಂಸ್ಥೆಗಳಾದ ಅಗ್ರಹಾರ, ಶಿವಪುರಿ, ಬ್ರಹ್ಮಪುರಿ, ಘಟಿಕಸ್ಥಾನ ಮತ್ತು ಮಠಗಳು ಸಾಂಪ್ರದಾಯಿಕ ಶಿಕ್ಷಣ ಪದ್ಧತಿಗಳಲ್ಲಿ ಬೋಧಿಸುತ್ತಿದ್ದವು. ಮಠಗಳು ವಸತಿ ಶಾಲೆಗಳಾಗಿದ್ದು, ಗುರುಶಿಷ್ಯರು ಒಟ್ಟಿಗೆ ವಾಸಿಸುತ್ತಿದ್ದರು. ಅಗ್ರಹಾರ ಮತ್ತು ಬ್ರಹ್ಮಪುರಿಗಳು ಪಂಡಿತರ ವಸತಿಗಳಾಗಿದ್ದು, ವಿದ್ಯಾರ್ಥಿಗಳಿಗೆ ಅಧ್ಯಯನ, ಮನನ ಮತ್ತು ಪಠಣ(three R’s Reading, Writing and Arithmetic) ಗಳ ತರಬೇತಿ ನೀಡಲಾಗುತ್ತಿತ್ತು. ಗ್ರಾಮೀಣ ವಿದ್ಯಾರ್ಜನೆಗೆ ಪ್ರತ್ಯೇಕ ವ್ಯವಸ್ಥೆ ಇದ್ದಿತು. ಘಟಿಕಾ ಸ್ಥಾನಗಳಲ್ಲಿ ಪದವಿ ಪ್ರಧಾನ ಮಾಡುವುದು ಮತ್ತು ವಿದ್ವತ್ತನ್ನು ಗುರುತಿಸಿ ಅರ್ಹತಾ ಪತ್ರ ನೀಡಲಾಗುತ್ತಿತ್ತು. ಶ್ರೀಮಂತ ಕುಟುಂಬಗಳು ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ನೀಡಲು ತಾವೇ ಖಾಸಗಿಯಾಗಿ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದರು. ದೇವಸ್ಥಾನ, ಛತ್ರ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ಮನೆಯಲ್ಲಿ ಉಪಾಧ್ಯಾಯರು ಶಾಲೆಗಳನ್ನು ನಡೆಸುತ್ತಿದ್ದರು. ಅವರಿಗೆ ಸುಗ್ಗಿಯ ಕಾಲದಲ್ಲಿ ದವಸ, ಧಾನ್ಯಗಳನ್ನೋ ಅಥವಾ ಹಣವನ್ನೋ ಜನರು ನೀಡುತ್ತಿದ್ದರು. ನಂತರ ಕೂಲಿಮಠ, ಸಾಲಿಮಠ ಅಥವಾ ಓದಿಸುವ ಮಠಗಳು ಪ್ರಾರಂಭಗೊಂಡವು. ಓದು, ಬರಹ ಮತ್ತು ಮಗ್ಗಿ ಅಥವಾ ಗಣಿತವನ್ನು ಹೇಳಿಕೊಡಲಾಗುತ್ತಿತ್ತು. ವಾಕ್ಯಗಳನ್ನು, ಪದ್ಯಗಳನ್ನು ಎಲ್ಲಾ ವಿದ್ಯಾರ್ಥಿಗಳಿಗೂ ಬಾಯಿಪಾಠ ಮಾಡಿಸುವುದರ ಮೂಲಕ ಕಲಿಸಲಾಗುತ್ತಿತ್ತು. ತುಂಟ ಹುಡುಗರನ್ನು, ನಿಧಾನ ಕಲಿಕೆಯವರನ್ನು ಹತೋಟಿಯಲ್ಲಿಡಲು ಬೆತ್ತದ ಛಡಿ ಮುಖ್ಯ ಪಾತ್ರವಹಿಸುತ್ತಿತ್ತು.

ಶಿಕ್ಷಣ ಮತ್ತು ಕ್ರೀಡೆ

ತುಮಕೂರು ಜಿಲ್ಲೆಯು ಕಲ್ಪತರುನಾಡು ಎಂದು ಪ್ರಸಿದ್ಧಿ ಪಡೆದಿದೆ. ಈ ಜಿಲ್ಲೆಯು ಒಟ್ಟು 10,598 ಚ.ಕಿ.ಮೀ. ವಿಸ್ತೀರ್ಣ ಹೊಂದಿದೆ. ತುಮಕೂರು ಜಿಲ್ಲೆಯು ಭೌಗೋಳಿಕ ಹಾಗೂ ಸಾಂಸ್ಕೃತಿಕ ವೈವಿಧ್ಯತೆಗಳನ್ನೊಳಗೊಂಡಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಪ್ರಗತಿಯನ್ನು ಸಾಧಿಸಿದೆ. ನಹಿ ಜ್ಞಾನೇನ ಸದೃಶಂ ಎಂಬ ವೇದ ವಾಕ್ಯದಂತೆ ಜ್ಞಾನಕ್ಕೆ ಸಮಾನವಾದುದು ಬೇರೊಂದಿಲ್ಲ. ಈ ಜ್ಞಾನವನ್ನು ಧಾರೆಯೆರೆಯುವ ಕಾರ್ಯವನ್ನು ಶಿಕ್ಷಣ ಇಲಾಖೆ ಮಾಡುತ್ತಿದೆ. ಮಾನವನ ಸರ್ವಾಂಗೀಣ ಬೆಳವಣಿಗೆಗೆ ಶಿಕ್ಷಣ ಅತ್ಯವಶ್ಯವಾಗಿದೆ. ಪ್ರಾಥಮಿಕ ಶಿಕ್ಷಣವು ಶಿಕ್ಷಣದ ಅಡಿಗಲ್ಲಾಗಿರುತ್ತದೆ. ಈ ದಿಸೆಯಲ್ಲಿ ತುಮಕೂರು ಜಿಲ್ಲೆಯ ಶಿಕ್ಷಣದ ಬಗೆಗಿನ ಮಾಹಿತಿ ಈ ಅಧ್ಯಾಯದಲ್ಲಿ ನೀಡಿದೆ.

ಶಿಕ್ಷಣ ಮತ್ತು ಕ್ರೀಡೆಗಳು

ಪ್ರಾಚೀನ ಕಾಲದಲ್ಲಿ ಶಿಕ್ಷಣ: ಪ್ರಾಚೀನ ಕಾಲದಲ್ಲಿ ಭಾರತದ ಇತರೆಡೆಯಲ್ಲಿದ್ದಂತೆ ವೈದಿಕ ಶಿಕ್ಷಣ ಈ ಭಾಗದಲ್ಲಿಯೂ ಪ್ರಚಲಿತವಾಗಿತ್ತು. ಆ ಕಾಲದಲ್ಲಿ ಶಿಕ್ಷಣ ವಿಧಾನ ಬಹುತೇಕ ಮೌಖಿಕವಾಗಿತ್ತು. ಕಲಿಕಾರ್ಥಿಗಳು ಗ್ರಂಥಗಳ ಹೆಚ್ಚಿನ ಮಾಹಿತಿಗಳನ್ನು ಕೇವಲ ಕಂಠಪಾಠದ ಮೂಲಕ ಕಲಿತು ನೆನಪಿನಲ್ಲಿಟ್ಟು ಕೊಳ್ಳಬೇಕಾಗಿತ್ತು. ಬ್ರಾಹ್ಮಣರು, ಕ್ಷತ್ರಿಯರು ಮತ್ತು ವೈಶ್ಯರು ತಮ್ಮ ಕಸುಬಿಗೆ ಸಂಬಂಧಿಸಿದ ಶಿಕ್ಷಣ ಪಡೆಯುತ್ತಿದ್ದರು. ಬ್ರಾಹ್ಮಣರ ಶಿಕ್ಷಣ ವಿಷಯ, ಜ್ಞಾನ ಮತ್ತು ವೈದಿಕ ವೃತ್ತಿಗೆ ಸಂಬಂಧಿಸಿದ್ದಾಗಿತ್ತು. ಪಠ್ಯಕ್ರಮದಲ್ಲಿ ವೇದಾಂತ, ಗಣಿತ, ಅರ್ಥಶಾಸ್ತ್ರ, ವ್ಯಾಕರಣ, ತರ್ಕಶಾಸ್ತ್ರ, ನೀತಿಶಾಸ್ತ್ರ, ಖಗೋಳಶಾಸ್ತ್ರ, ಶಬ್ದಶಾಸ್ತ್ರ ಮುಂತಾದ ವಿಷಯಗಳ ಜೊತೆಗೆ ನೃತ್ಯ, ಸಂಗೀತ ಇತ್ಯಾದಿ ಪ್ರಾಯೋಗಿಕ ಲಲಿತ ಕಲೆಗಳು ಸೇರಿದ್ದವು.

ಶಿಕ್ಷಣ ಹಾಗೂ ಸಾಮಾಜಿಕ ಜೀವನ

ಪ್ರಾಚೀನ ಕರ್ನಾಟಕದಲ್ಲಿ, ಅಗ್ರಹಾರ, ಮಠ ಹಾಗೂ ಘಟಿಕಸ್ಥಾನ ಎಂಬ ಶಿಕ್ಷಣ ಸಂಸ್ಥೆಗಳ ಬಲಿಷ್ಠವಾದ ಹಂದರವು ಅಸ್ತಿತ್ವದಲ್ಲಿತ್ತು. ಭೂಮಿ, ಮನೆ ಹಾಗೂ ಇತರ ಸೌಕರ್ಯಗಳನ್ನು ನೀಡಲಾದ ಬ್ರಾಹ್ಮಣ ವಿದ್ವಾಂಸ ವಸಾಹತುಗಳನ್ನು ಅಗ್ರಹಾರವೆಂದು ಕರೆಯ ಲಾಗುತ್ತಿತ್ತು. ಬ್ರಾಹ್ಮಣರಿಂದ ಅಪೇಕ್ಷಿಸಲಾದ ಷಟ್ಕರ್ಮಗಳ ಭಾಗವಾದ ವ್ಯಾಸಂಘಿಕ ಸಾಧನೆಗಳನ್ನು ಪೂರೈಸಲು ಸಾಧ್ಯವಾಗಲೆಂದು ಅವರಿಗೆ ಇವೆಲ್ಲವನ್ನೂ ನೀಡಲಾಗುತ್ತಿತ್ತು. ಆ ಆರು ಕರ್ಮಗಳು ಅಥವಾ ಹೊಣೆಗಾರಿಕೆಗಳು ಯಾವುವೆಂದರೆ, ಯಜ್ಞ (ಬಲಿಗಳನ್ನು ನೀಡುವುದು / ಹೋಮ-ಹವನಾದಿಗಳನ್ನು ಮಾಡುವುದು), ಯಾಜನ (ಹೋಮ-ಹವನಾದಿಗಳ ಪಾರುಪತ್ಯವನ್ನು ವಹಿಸುವುದು), ಅಧ್ಯಯನ (ತಮ್ಮನ್ನು ತಾವು ಓದು/ಅಧ್ಯಯನದಲ್ಲಿ ತೊಡಗಿಸಿಕೊಳ್ಳುವುದು), ಅಧ್ಯಾಪನ (ಬೋಧನೆ), ದಾನ (ಉಡುಗೊರೆಗಳನ್ನು ನೀಡುವುದು) ಹಾಗೂ ಪ್ರತಿಗ್ರಹ (ಉಡುಗೊರೆಗಳನ್ನು ಪಡೆಯುವುದು).

ಶಿರಿಯೂರ ಮಂಜುನಾಯ್ಕ

ಕರ್ನಾಟಕದ ಎಲ್ಲಾ ಭಾಗಗಳಲ್ಲಿ ಯಕ್ಷಗಾನ ರಂಗ ಕಲೆ ಬೇರೆ ಬೇರೆ ರೂಪಗಳಲ್ಲಿ ಪ್ರಕಟವಾಗಿದ್ದರೂ, ಕರಾವಳಿ ಜಿಲ್ಲೆಗಳಲ್ಲಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಜನಪ್ರಿಯವಾದ ಕಲೆಯಾಗಿ ಅಸ್ತಿತ್ವದಲ್ಲಿದೆ. ಇದರಲ್ಲಿ ತೆಂಕುತಿಟ್ಟು, ಬಡಗುತಿಟ್ಟು ಎಂಬ ಭೇದಗಳನ್ನು ಗುರುತಿಸುವ ರೂಢಿಯಿದೆ.

ಶಿವಪ್ರಕಾಶರ ಕವಿತೆಗಳು

ಬೆಳಿಗ್ಗೆ ಅಷ್ಟು ಹೊತ್ತಿಗೇ ನಾಯಿಯ ಜೊತೆಗೆ ಮುದುಕ ಊರಾಚೆಗೆ ವಾಕಿಂಗು ಹೊರಟನು. ಕೋಲೂರಿ ನಡೆಯುತ್ತಾ, ಬೆಟ್ಟಗಳು ರೆಕ್ಕೆ ಬಿಚ್ಚಿರುವುದನ್ನು ಕಂಡು, ಹಾರಲಿ ಅಂತ ಬೆಳಿಗ್ಗೆ ಅಷ್ಟು ಹೊತ್ತಿಗೇ ನಾಯಿಯ ಜೊತೆಗೆ ಮುದುಕ ಊರಾಚೆಗೆ ವಾಕಿಂಗು ಹೊರಟನು. ಕೋಲೂರಿ ನಡೆಯುತ್ತಾ, ಬೆಟ್ಟಗಳು ರೆಕ್ಕೆ ಬಿಚ್ಚಿರುವುದನ್ನು ಕಂಡು, ಹಾರಲಿ ಅಂತ

ಶಿವಮೊಗ್ಗ ಜಿಲ್ಲಾ ರಂಗಮಾಹಿತಿ

“ಸಿಹಿಮೊಗೆ” ಎಂಬ ಅಭಿಮಾನದ ನುಡಿಯನ್ನು ಹೊತ್ತ ಶಿವಮೊಗ್ಗವು ವೈವಿಧ್ಯಮಯ ಸಂಸ್ಕೃತಿಯನ್ನು ಹೊಂದಿರುವ ನಾಡು. ಮಲೆನಾಡಿನ “ಹೆಬ್ಬಾಗಿಲು” ಎಂದೇ ಖ್ಯಾತವಾಗಿರುವ “ಸಿಹಿಮೊಗೆ”ಯು ನೈಸರ್ಗಿಕವಾಗಿ, ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ, ಸಾಹಿತ್ಯಾತ್ಮಕವಾಗಿ, ರಾಜಕೀಯವಾಗಿ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ತನ್ನದೇ ಆದ ವಿಭಿನ್ನ ನೆಲೆಯನ್ನು ಹೊಂದಿರುವ ಬೀಡು.

ಶಿವೇಶ್ವರ ದೊಡ್ಡಮನಿ ಜೀವನ ಸಾಹಿತ್ಯ

ನವಲೂರು: ತನ್ನ ಈ ಹುಟ್ಟಿದೂರಿಗೆ ನವಿಲೂರು ಎಂಬ ಕಾವ್ಯಮಯ ಹೆಸರನ್ನಿಟ್ಟಿದ್ದವರು ಕವಿ ಶಿವೇಶ್ವರ ದೊಡ್ಡಮನಿ (೧೯೨೫-೧೯೫೦). ನವಲೂರು: ತನ್ನ ಈ ಹುಟ್ಟಿದೂರಿಗೆ ನವಿಲೂರು ಎಂಬ ಕಾವ್ಯಮಯ ಹೆಸರನ್ನಿಟ್ಟಿದ್ದವರು ಕವಿ ಶಿವೇಶ್ವರ ದೊಡ್ಡಮನಿ (೧೯೨೫-೧೯೫೦).

ಶೇಕ್ಸ್‌ ಪಿಯರ್ ಎರಡು ನಾಟಕಗಳ ಅಧ್ಯಯನ

‘ಜೂಲಿಯಸ್‌ ಸೀಸರ್‌’ ಸುಮಾರು ೧೫೯೯ರಲ್ಲಿ ರಚನೆಯಾದ ನಾಟಕ ಎಂದು ಹೇಳಲಾಗಿದೆ. ‘ಜೂಲಿಯಸ್‌ ಸೀಸರ್‌’ ಸುಮಾರು ೧೫೯೯ರಲ್ಲಿ ರಚನೆಯಾದ ನಾಟಕ ಎಂದು ಹೇಳಲಾಗಿದೆ.

ಶ್ರೀ ಎಂ.ಆರ್‌.ಬುದ್ಧಿವಂತ ಶೆಟ್ಟಿ

ಶ್ರೀ ಎಂ.ಆರ್‌. (ಮಿರಿಯಾಲ ರಂಗಯ್ಯ) ಬುದ್ಧಿವಂತ ಶೆಟ್ಟಿ ಅವರು ಗುಲಬರ್ಗಾ ಜಿಲ್ಲೆಯ ಸುರಪುರ ಪಟ್ಟಣದ ಒಂದು ಭಾಗವೇ ಆದ ರಂಗಪೇಟೆಯಲ್ಲಿ ಅವರ ಜನ್ಮ ಕುಂಡಲಿಯಲ್ಲಿರುವಂತೆ, ಶಾಲಿವಾಹನ ಶಕೆ 1843ರ ದುರ್ಮತಿನಾಮ ಸಂವತ್ಸರದ ಮಾರ್ಗಶಿರ ಬಹುಳ ಪ್ರತಿಪದೆಯಂದು, ಅಂದರೆ 1921ರಲ್ಲಿ ಜನಿಸಿದರು. ತಾಯಿ ಸುಭದ್ರಮ್ಮ ತಂದೆ ರಂಗಯ್ಯ.

ಶ್ರೀ ಕುಂದ ಕುಂದಾಚಾರ್ಯರು

ಮಹಾವೀರರು ಬೋಧಿಸಿದ ಧರ್ಮದ ಪರಂಪರೆಯಲ್ಲಿ ಎಷ್ಟೋ ಮಹಾಪುರುಷರು ಆಗಿಹೋಗಿದ್ದಾರೆ. ಆದರೆ ಅವರೆಲ್ಲರನ್ನೂ ಏಕಕಾಲದಲ್ಲಿ ಸ್ಮರಣೆಮಾಡುವುದಿಲ್ಲ. ಮಹಾವೀರರ ನಂತರ ತತ್‌ಕ್ಷಣ ಸ್ಮರಿಸಿಕೊಳ್ಳುವುದು ಅವರ ಪ್ರಥಮ ಶಿಷ್ಯರಾದ ಪ್ರಥಮ ಗಣಧರ ಇಂದ್ರಭೂತಿ ಗೌತಮ ಸ್ಮಾಮಿಯವರನ್ನು. ಗೌರಮ ಗಣಧರರ ನಂತರ ಸುಧರ್ಮ ಮತ್ತು ಜಂಬೂಸ್ವಾಮಿಗಳು ಕೇವಲಿಗಳಾದರು. ಆನಂತರ ಐದು ಜನ ಶ್ರುತಕೇವಲಿಗಳಾದರು. ಇವರೆಲ್ಲರ ನಂತರ ಈ ಪರಂಪರೆಯಲ್ಲಿ ಬಂದ ಶ್ರೀ ಕುಂದ ಕುಂದಾಚಾರ್ಯರನ್ನು ಗೌತಮ ಸ್ವಾಮಿಯವರ ನಂತರ ಸ್ಮರಣೆ ಮಾಡಲಾಗುತ್ತದೆ.