Showing 10411–10440 of 10484 results

ಸವ್ಯಸಾಚಿ ಪಂಪ

ಮುದ್ದುಮುದ್ದಾಗಿ ಬೆಳೆಯುತ್ತಿದ್ದ ಮಗು ಪದ್ಮಪ್ರಭ ಮನೆಯವರ ಬಾಯಲ್ಲಿ ಪದ್ಮಪನಾಗಿದ್ದ. ಜನರ ನಾಲಗೆಯಲ್ಲಿ ಪಂಪನಾಗಿದ್ದ. ಮುದ್ದುಮುದ್ದಾಗಿ ಬೆಳೆಯುತ್ತಿದ್ದ ಮಗು ಪದ್ಮಪ್ರಭ ಮನೆಯವರ ಬಾಯಲ್ಲಿ ಪದ್ಮಪನಾಗಿದ್ದ. ಜನರ ನಾಲಗೆಯಲ್ಲಿ ಪಂಪನಾಗಿದ್ದ.

ಸಂಸ್ಕೃತ ಮತ್ತು ವಿಜ್ಞಾನ

ಒಂದು ಭಾಷೆಯಾಗಿ ಸಂಸ್ಕೃತ ಒಂದು ಭಾಷೆಯಾಗಿ ಸಂಸ್ಕೃತ

ಸಂಸ್ಕೃತಿ

ಕರ್ನಾಟಕದ ಸಾಂಸ್ಕೃತಿಕ ಪರಂಪರೆಯು ಶ್ರೀಮಂತವೂ, ವೈವಿಧ್ಯಪೂರ್ಣವೂ ಆಗಿದ್ದು ‘ಬಹುಮುಖಿ ಸಂಸ್ಕೃತಿ’ ಎಂದು ಹೆಸರು ಪಡೆದಿದೆ. ಕನ್ನಡ ಸಾಹಿತ್ಯದಲ್ಲಿ ದೊರೆತಿರುವ ಪ್ರಥಮ ಕೃತಿ ಸುಮಾರು 9ನೇ ಶತಮಾನದ್ದಾಗಿದೆ. ಈ ಆಧುನಿಕ ಕಾಲಮಾನದಲ್ಲಿ ತಮ್ಮ ಸಾಹಿತ್ಯಿಕ ಸೃಜನಶೀಲ ಪ್ರತಿಭೆಗಾಗಿ ಎಂಟು ಜನ ಮಹನೀಯರು ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದಿದ್ದಾರೆ. ರಾಜ್ಯದ ಇತರ ಸ್ಥಳೀಯ ಮುಖ್ಯ ಭಾಷೆಗಳಾದ ತುಳು ಮತ್ತು ಕೊಡವ ಭಾಷೆಗಳಲ್ಲಿಯೂ ಸಾಹಿತ್ಯಕ ಚಟುವಟಿಕೆಗಳು ಗಮನಾರ್ಹವಾಗಿವೆ. ಕನ್ನಡ ಪತ್ರಿಕೋದ್ಯಮದ ಚರಿತ್ರೆಯು ಕ್ರಿ.ಶ 1843ರಷ್ಟು ದಿನಿಂದಲೇ ಆರಂಭವಾಗಿ, ಅನೇಕ ಸಾಧನೆಗಳನ್ನು ಮಾಡಲಾಗಿದೆ.

ಸಸ್ಯ ಸಂಜೀವಿನಿ

ಹೇಗೆ ಅರ್ಜುನನು ತನ್ನ ಬಿಲ್ಲು ವಿದ್ಯೆಯಿಂದ ಯುದ್ಧದಲ್ಲಿ ಹೋರಾಡಿ ಜಯವನ್ನು ಪಡೆದನೋ, ಹಾಗೆಯೇ ಅರ್ಜುನನಂತೆ ಇರುವ ಅರ್ಜುನ ವೃಕ್ಷವು ತನ್ನ ಔಷಧ ಗುಣಗಳಿಂದ ರೋಗಗಳ ವಿರುದ್ಧ ಹೋರಾಡಿ ಜಯವನ್ನು ಗಳಿಸಿದೆ. ಹೇಗೆ ಅರ್ಜುನನು ತನ್ನ ಬಿಲ್ಲು ವಿದ್ಯೆಯಿಂದ ಯುದ್ಧದಲ್ಲಿ ಹೋರಾಡಿ ಜಯವನ್ನು ಪಡೆದನೋ, ಹಾಗೆಯೇ ಅರ್ಜುನನಂತೆ ಇರುವ ಅರ್ಜುನ ವೃಕ್ಷವು ತನ್ನ ಔಷಧ ಗುಣಗಳಿಂದ ರೋಗಗಳ ವಿರುದ್ಧ ಹೋರಾಡಿ ಜಯವನ್ನು ಗಳಿಸಿದೆ.

ಸಾಂಕ್ರಾಮಿಕ ರೋಗಗಳ ನಿಯಂತ್ರಣ ಮತ್ತು ತಡೆಗಟ್ಟುವಿಕೆ

ಸಾಂಕ್ರಾಮಿಕವಾಗಿ ಹರಡುವ ರೋಗಗಳನ್ನು ಕುರಿತು ಅಧ್ಯಯನ, ತನಿಖೆ ಮಾಡುವುದನ್ನು ಸಾಂಕ್ರಾಮಿಕ ರೋಗಶಾಸ್ತ್ರವೆಂದು ಕರೆಯುತ್ತಾರೆ. ಈ ಶಾಸ್ತ್ರದಲ್ಲಿ ಸಾಂಕ್ರಾಮಿಕ (ಅಂಟು) ರೋಗಗಳು, ಸಾಂಕ್ರಾಮಿಕವಾಗಿ ಹರಡಲು ಕಾರಣಗಳನ್ನು ತಿಳಿದುಕೊಳ್ಳಲಾಗುವುದಲ್ಲದೆ, ತಡೆಗಟ್ಟುವಿಕೆ, ನಿಯಂತ್ರಿಸುವುದರ ಬಗ್ಗೆಯೂ ಕಾರ್ಯಕ್ರಮಗಳನ್ನು ಸಮುದಾಯವಾಗಿ ಸಹಕಾರದೊಂದಿಗೆ, ಆರೋಗ್ಯ ಇಲಾಖೆ ಹಮ್ಮಿಕೊಳ್ಳುತ್ತದೆ.

ಸಾಂಪ್ರದಾಯಿಕ ಒಕ್ಕಲುತನ

೧೯೮೬ರಲ್ಲಿ ನಮ್ಮೂರಲ್ಲಿ ಕೃಷಿ ವಿಚಾರ ವಿನಿಮಯ ಕೇಂದ್ರವನ್ನು ಸ್ಥಾಪಿಸಿದೆವು. ಆ ಕೇಂದ್ರದ ವತಿಯಿಂದ ನೂರಾರು ಕಾರ್ಯ ಚಟುವಟಿಕೆಗಳನ್ನು ಮಾಡುತ್ತ ಬಂದಿದ್ದೇವೆ. ೧೯೮೬ರಲ್ಲಿ ನಮ್ಮೂರಲ್ಲಿ ಕೃಷಿ ವಿಚಾರ ವಿನಿಮಯ ಕೇಂದ್ರವನ್ನು ಸ್ಥಾಪಿಸಿದೆವು. ಆ ಕೇಂದ್ರದ ವತಿಯಿಂದ ನೂರಾರು ಕಾರ್ಯ ಚಟುವಟಿಕೆಗಳನ್ನು ಮಾಡುತ್ತ ಬಂದಿದ್ದೇವೆ.

ಸಾಮಾಜಿಕ ನೆಲೆ

ಎಸ್‌.ಜಿ.ನರಸಿಂಹಾಚಾರ್ಯ, ಜಯರಾಮಾಚಾರ್ಯ, ಎಸ್‌.ಜಿ.ಗೋವಿಂದರಾಜಯ್ಯಂಗಾರ್ಯ, ಪಂಜೆ ಮಂಗೇಶರಾಯ, ಹಟ್ಟಂಗಡಿ ನಾರಾಯಣರಾಯ, ಶಾಂತಕವಿ, ಸಾಲಿ ರಾಮಚಂದ್ರರಾಯ-ಇವರೇ ಎಸ್‌.ಜಿ.ನರಸಿಂಹಾಚಾರ್ಯ, ಜಯರಾಮಾಚಾರ್ಯ, ಎಸ್‌.ಜಿ.ಗೋವಿಂದರಾಜಯ್ಯಂಗಾರ್ಯ, ಪಂಜೆ ಮಂಗೇಶರಾಯ, ಹಟ್ಟಂಗಡಿ ನಾರಾಯಣರಾಯ, ಶಾಂತಕವಿ, ಸಾಲಿ ರಾಮಚಂದ್ರರಾಯ-ಇವರೇ

ಸಾಮಾನ್ಯ ಕಾಯಿಲೆಗಳಿಗೆ ಮನೆಮದ್ದು

ಭಾರತೀಯ ಸಂಸ್ಕೃತಿಯ ಒಂದು ಭಾಗವೇ “ಮನೆಮದ್ದು”. ಪ್ರಾಚೀನ ಭಾರತದಲ್ಲಿ ಪ್ರತಿ ವಿದ್ಯಾರ್ಥಿಯೂ ಇತರ ವಿಷಯಗಳೊಂದಿಗೆ “ವೈದ್ಯ”ವನ್ನು ಮುಖ್ಯ ವಿಷಯವನ್ನಾಗಿ ಕಲಿಯಬೇಕಿತ್ತು. ಈಗಲೂ ಅದು ಪ್ರಸ್ತುತವೆನಿಸುತ್ತದೆ. ನಮ್ಮ ಅಡುಗೆಮನೆಯಲ್ಲಿಯೇ ಔಷಧಿಗಳ “ಕಣಜ”ವಿದೆ. ಸಣ್ಣ ಪುಟ್ಟ ತೊಂದರೆಗಳುಂಟಾದಾಗ ಆ “ಕಣಜ”ದಿಂದಲೇ ಪದಾರ್ಥಗಳನ್ನು ಆಯ್ದು ಚಿಕಿತ್ಸೆ ಮಾಡಿಕೊಳ್ಳಬಹುದೆಂಬ ತಿಳುವಳಿಕೆ ಅನೇಕರಿಗೆ ಇರಲಿಕ್ಕಿಲ್ಲ.

ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು

ಭೂಮಿಯ ಮೇಲೆ ಜೀವ-ಜಂತುಗಳ ಉಗಮವಾಗುತ್ತಿದ್ದಂತೆಯೇ ರೋಗ ರುಜಿನಗಳೂ ಅವುಗಳ ಬೆನ್ನು ಹತ್ತಿವೆ; ವಿಕಾಸದ ಜೊತೆಗೇ ಚಿಕಿತ್ಸಾ ವಿಧಾನಗಳೂ ಮೂಡಿ ಬಂದಿವೆ. ಭೂಮಿಯ ಮೇಲೆ ಜೀವ-ಜಂತುಗಳ ಉಗಮವಾಗುತ್ತಿದ್ದಂತೆಯೇ ರೋಗ ರುಜಿನಗಳೂ ಅವುಗಳ ಬೆನ್ನು ಹತ್ತಿವೆ; ವಿಕಾಸದ ಜೊತೆಗೇ ಚಿಕಿತ್ಸಾ ವಿಧಾನಗಳೂ ಮೂಡಿ ಬಂದಿವೆ.

ಸಾಮ್ರಾಜಶಾಹಿ ರಾಜವಂಶಗಳ ಯುಗ

ಈ ಅವಧಿಯಲ್ಲಿ, ಬಾದಾಮಿಯ ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣದ ಚಾಳುಕ್ಯರು ಹಾಗೂ ಹೊಯ್ಸಳರು ಕರ್ನಾಟಕದಲ್ಲಿ ಬಲಿಷ್ಠ ಸಾಮ್ರಾಜ್ಯಗಳನ್ನು ನಿರ್ಮಾಣ ಮಾಡಿ, ರಾಜಕೀಯ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳೆರಡರ ಸುಭಿಕ್ಷತೆಗೆ ಅವಕಾಶ ಮಾಡಿಕೊಟ್ಟರು. ಅಲ್ಲಿಯತನಕ, ಕರ್ನಾಟಕದ ಅರಸರು ಕರ್ನಾಟಕದ ಗಡಿಪ್ರದೇಶಗಳ ಒಳಗೆ ಆಳ್ವಿಕೆ ನಡೆಸಿದ್ದರು. ಆದರೆ, ಈ ರಾಜವಂಶಗಳ ಆಗಮನದಿಂದ, ದಕ್ಷಿಣಪಥದ ಬಹುತೇಕ ಭಾಗದ ಮೇಲೆ ನಿಯಂತ್ರಣ ಸಾಧಿಸಲು ಇವರಿಗೆ ಸಾಧ್ಯವಾಯಿತು. ತಮ್ಮ ಸಾಮ್ರಾಜ್ಯಗಳನ್ನು ಉತ್ತರಕ್ಕೆ ಹಾಗೂ ದಕ್ಷಿಣ ಭಾರತದ ತಮಿಳುನಾಡಿನವರೆಗೂ ವಿಸ್ತರಿಸಿಕೊಂಡರು. ರಾಜಕೀಯ ಬಲ ಹಾಗೂ ಆರ್ಥಿಕ ಸಮೃದ್ಧಿಯೆಂದು ಗುರುತಿಸಲ್ಪಡುವ ಈ ಅವಧಿಯು, ಸಾಹಿತ್ಯ, ಕಲೆ ಹಾಗೂ ವಾಸ್ತು ನಿರ್ಮಾಣ ಕ್ಷೇತ್ರಗಳ ಅಭಿವೃದ್ಧಿಗೂ ಸಾಕ್ಷಿಯಾಯಿತು.

ಸಾಮ್ರಾಟ್‌ ಶ್ರೇಣಿಕ ಬಿಂಬಸಾರ

ಪ್ರಾಚೀನ ಕಾಲದಲ್ಲಿ ದಕ್ಷಿಣ ಬಿಹಾರದ ಪಾಟ್ನಾ ಮತ್ತು ಗಯಾ ಜಿಲ್ಲೆಗಳನ್ನು ‘ಮಗಧ’ ಎಂದು ಕರೆಯುತ್ತಿದ್ದರು. ಇದನ್ನು ಆಳಿದ ರಾಜರಲ್ಲಿ ಸಾಮ್ರಾಟ್‌ ಶ್ರೇಣಿಕನು ಪ್ರಸಿದ್ಧನಾದವನು. ಈತನನ್ನು ಬಿಂಬಸಾರನೆಂದೂ ಕರೆಯುತ್ತಿದ್ದರು. ಶ್ವೇತಾಂಬರ ಗ್ರಂಥಗಳಲ್ಲಿ ಬಿಂಬಸಾರನೆಂದೇ ಉಲ್ಲೇಖವಾಗಿದೆ.

ಸಾರಿಗೆ ಮತ್ತು ಸಂಪರ್ಕ

ಕರ್ನಾಟಕ ರಾಜ್ಯಕ್ಕೆ ಶ್ರೀಮಂತವೂ ಸಂಪದ್ಭರಿತವೂ ಆದ ಆರ್ಥಿಕ ಹಾಗೂ ಸಾಂಸ್ಕೃತಿಕ ಪರಂಪರೆಯಿದೆ. ಕೌಟಿಲ್ಯ ಮುಂತಾದ ಭಾರತೀಯ ಚಿಂತಕರ ಗ್ರಂಥಗಳಲ್ಲಿ, ಹಾಗೂ ಪ್ಲಿನಿ, ಟಾಲೆಮಿ ಮತ್ತು ಆಲ್ಬೆರುನಿಯಂತಹ ವಿದೇಶಿಯರ ಪ್ರವಾಸ ಕಥನಗಳಲ್ಲಿ ಕರ್ನಾಟಕದ ಸಾರಿಗೆ ಮತ್ತು ಸಂಪರ್ಕ ವ್ಯವಸ್ಥೆಗೆ ಸಂಬಂಧಿಸಿದಂತೆ ಸಾಕಷ್ಟು ಉಲ್ಲೇಖಗಳಿವೆ. ಕರ್ನಾಟಕದ ವಿವಿಧೆಡೆಗಳಲ್ಲಿ ಪ್ರಾಗೈತಿಹಾಸಿಕ ತಾಣಗಳೂ ಸೇರಿದಂತೆ ದೊರೆತಿರುವ ಅಶೋಕನ ಹತ್ತಾರು ಶಿಲಾಶಾಸನಗಳು, ಆ ಕಾಲದ ಸಾಮಾಜಿಕ-ಸಾಂಸ್ಕೃತಿಕ ಸಂಬಂಧಗಳ ಬಗ್ಗೆ ಮಾಹಿತಿ ನೀಡುತ್ತವೆ. ಶಾತವಾಹನ ಅರಸ ಹಾಲನು ರಚಿಸಿರುವ ‘ಗಾಥಾಸಪ್ತಸತಿ’ ಯಲ್ಲಿ ದೊಡ್ಡ ಹಾಗೂ ಸಣ್ಣ ರಸ್ತೆಗಳ ಬಗ್ಗೆ ಉಲ್ಲೇಖವಿದೆ. ಪ್ರಾಚೀನ ಕರ್ನಾಟಕದಲ್ಲಿದ್ದ ರಸ್ತೆ ವ್ಯವಸ್ಥೆ ಹಾಗೂ ವಾಣಿಜ್ಯ ವ್ಯವಸ್ಥೆಗಳ ಬಗ್ಗೆ ಶಾಸನಗಳಲ್ಲಿ ಮಾಹಿತಿ ಲಭಿಸುತ್ತದೆ. ಮಂಡ್ಯ ತಾಲ್ಲೂಕಿನ ಹಲ್ಲೆಗೆರೆಯಲ್ಲಿ ದೊರೆತಿರುವ ಗಂಗ ಅರಸ ದೊರೆ ಒಂದನೆಯ ಶಿವಮಾರನ ಕ್ರಿ.ಶ. 713ರ ತಾಮ್ರಶಾಸನ, ಕಿಲಿನಿ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಸೇತುವೆ ಹಾಗೂ ಗ್ರಾಮದ ನಡುವೆ ಹಾದು ಹೋಗುತ್ತಿದ್ದ “ರಾಜಪಥ”ದ ಬಗ್ಗೆ ದಾಖಲಿಸುತ್ತದೆ. ಉತ್ತರ ಕರ್ನಾಟಕದ ಪ್ರಮುಖ ವಾಣಿಜ್ಯ ಕೇಂದ್ರಗಳಾದ ತೇರದಾಳ ಮತ್ತು ಹಲಸಿಗಳನ್ನು ಜೋಡಿಸುತ್ತಿದ್ದ ಮುಖ್ಯರಸ್ತೆಯ ಬಗ್ಗೆ ಕ್ರಿ.ಶ.1123ರ ಶಾಸನವೊಂದು ತಿಳಿಸುತ್ತದೆ. ಚೋಳ ಶಾಸನವೊಂದು ತಂಜಾವೂರಿನಿಂದ ಆರಂಭಗೊಳ್ಳುತ್ತಿದ್ದ ರಾಜಪಥವೊಂದು ಚಾಳುಕ್ಯರ ರಾಜಧಾನಿಯಾಗಿದ್ದ ಕಲ್ಯಾಣ ಅಂದರೆ, ಇಂದಿನ ಬಸವಕಲ್ಯಾಣವನ್ನು ತಲುಪುತ್ತಿದ್ದುದರ ಬಗ್ಗೆ ಉಲ್ಲೇಖಿಸುತ್ತದೆ. ಇದೇ ರೀತಿ ಇನ್ನೊಂದು ಹೆದ್ದಾರಿ ಅಥವಾ ಪ್ರಧಾನ ಮಾರ್ಗವು ಕೊಂಕಣ ಪ್ರದೇಶವನ್ನು ಕರ್ನಾಟಕದ ಒಳಭಾಗದೊಂದಿಗೆ ಜೋಡಿಸುತ್ತಿದ್ದು, ಇಂದಿಗೂ ಗೋವಾದ ಗಡಿಭಾಗದಲ್ಲಿ ಈ ಹೆಸರಿನ ಸ್ಥಳವೊಂದಿದೆ. ಈ ರಸ್ತೆಗಳ ಉದ್ದಕ್ಕೂ ಕುಡಿಯುವ ನೀರಿನ ಸೌಲಭ್ಯವುಳ್ಳ ಅರವಟ್ಟಿಕೆ, ಛತ್ರ ಮತ್ತು ನೆರಳನ್ನು ನೀಡುವ ಮರದ ತೋಪುಗಳು ಇರುತ್ತಿದ್ದವು. ತೆಪ್ಪ ಮತ್ತು ದೋಣಿಗಳ ಮೂಲಕ ನದಿ ಮತ್ತು ತೊರೆಗಳ ನಡುವೆ ಸಂಚರಿಸುವುದು ಸರ್ವೇ ಸಾಮಾನ್ಯವಾಗಿತ್ತು. ಸರಕುಗಳನ್ನು ತಲೆಯ ಮೇಲೆ, ಕಾವಡಿಗಳಲ್ಲಿ ಅಥವಾ ಎತ್ತು, ಕತ್ತೆ ಮತ್ತು ಕೋಣಗಳ ಮೇಲೆ ಸಾಗಿಸಲಾಗುತ್ತಿತ್ತು. ರಸ್ತೆಗಳಿದ್ದ ಕಡೆ ಎತ್ತಿನಗಾಡಿ, ಬಂಡಿಗಳು ಸಂಚರಿಸುತ್ತಿದ್ದವು. ತುಂಗಭದ್ರಾ ನದಿಗೆ ಅಡ್ಡಲಾಗಿ ಹಂಪೆಯಲ್ಲಿ ಕಟ್ಟಿದ್ದ ಹಳೆಯ ಸೇತುವೆ, ಇಂದು ಕುರುಹಾಗಿಯಷ್ಟೇ ಉಳಿದಿದ್ದು, ಹಿಂದೆ ಹಂಪಿ ಮತ್ತು ಆನೆಗೊಂದಿಯನ್ನು ಇದು ಜೋಡಿಸುತ್ತಿತ್ತು. ಇಂತಹ ಹಳೆಯ ಸೇತುವೆಗಳನ್ನು ಹರಿಹರ, ಶ್ರೀರಂಗಪಟ್ಟಣ, ರಾಮನಗರ, ಶಿವಸಮುದ್ರ, ಪಾಣೆಮಂಗಳೂರು, ಕೂಳೂರು ಮುಂತಾದ ಸ್ಥಳಗಳಲ್ಲಿ ಇಂದಿಗೂ ನೋಡಬಹುದಾಗಿದೆ.

ಸಾರಿಗೆ ಮತ್ತು ಸಂಪರ್ಕ

ಕರ್ನಾಟಕ ರಾಜ್ಯ ಶ್ರೀಮಂತವೂ ಸಂಪದ್ಭರಿತವೂ ಆದ ಆರ್ಥಿಕ ಹಾಗೂ ಸಾಂಸ್ಕೃತಿಕ ಪರಂಪರೆಯಿಂದ ಕೂಡಿದ ನಾಡು. ಕೌಟಿಲ್ಯ ಮುಂತಾದ ಭಾರತೀಯ ಚಿಂತಕರ ಗ್ರಂಥಗಳಲ್ಲಿ ಹಾಗೂ ಪ್ಲಿನಿ, ಟಾಲೆಮಿ ಮತ್ತು ಆಲ್ಬೆರುನಿಯಂತಹ ವಿದೇಶಿಯರು ಬರೆದಿರುವ ತಮ್ಮ ಪ್ರವಾಸ ಕಥನಗಳಲ್ಲಿ ಕರ್ನಾಟಕದ ಸಾರಿಗೆ ಮತ್ತು ಸಂಪರ್ಕ ವ್ಯವಸ್ಥೆಗೆ ಸಂಬಂಧಿಸಿದಂತೆ ಸಾಕಷ್ಟು ಉಲ್ಲೇಖಗಳು ದೊರೆಯುತ್ತವೆ.

ಸಾಲುದೀಪಗಳು

ಫೆರ್ಡಿನಾಂಡ್‌ ಕಿಟೆಲ್‌ರು (೧೮೩೨-೧೯೦೩)ಕನ್ನಡವನ್ನು ಶ್ರೀಮಂತಗೊಳಿಸಿದ ಅಗ್ರಗಣ್ಯ ಕ್ರೈಸ್ತ ಮಿಶನರಿಗಳಲ್ಲಿ ಪ್ರಾತಃಸ್ಮರಣೀಯರು. ಫೆರ್ಡಿನಾಂಡ್‌ ಕಿಟೆಲ್‌ರು (೧೮೩೨-೧೯೦೩)ಕನ್ನಡವನ್ನು ಶ್ರೀಮಂತಗೊಳಿಸಿದ ಅಗ್ರಗಣ್ಯ ಕ್ರೈಸ್ತ ಮಿಶನರಿಗಳಲ್ಲಿ ಪ್ರಾತಃಸ್ಮರಣೀಯರು.

ಸಾವಳಗಿ ಮಹ್ಮದಸಾಬ

ಬ್ರಿಟೀಷರ ಸಹಾಯಕ ಸೈನಿಕ ಪದ್ಧತಿಗೆ ಒಳಗಾಗಿ ಹದಿನಾರು ಜಿಲ್ಲೆಗಳನ್ನೊಳಗೊಂಡ ‘ನೈಜಾಂ ಪ್ರಾಂತ’ ನಿಜಾಮರ ಬಿಗಿ ಬಂದೋಬಸ್ತಿನಲ್ಲಿ ಒಂದೇ ಸವನೆ ನರಳುತ್ತಿತ್ತು.ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗಿ ಬರಲು ದಾರಿ ಇರಲಿಲ್ಲ. ಬ್ರಿಟೀಷರ ಸಹಾಯಕ ಸೈನಿಕ ಪದ್ಧತಿಗೆ ಒಳಗಾಗಿ ಹದಿನಾರು ಜಿಲ್ಲೆಗಳನ್ನೊಳಗೊಂಡ ‘ನೈಜಾಂ ಪ್ರಾಂತ’ ನಿಜಾಮರ ಬಿಗಿ ಬಂದೋಬಸ್ತಿನಲ್ಲಿ ಒಂದೇ ಸವನೆ ನರಳುತ್ತಿತ್ತು.ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗಿ ಬರಲು ದಾರಿ ಇರಲಿಲ್ಲ.

ಸಾವಿಗೆ ಆಹ್ವಾನ

ಐತಿಹಾಸಿಕ ಮತ್ತು ಧಾರ್ಮಿಕ ಮಹತ್ವದ ಪುಟ್ಟ ಪಟ್ಟಣವಾದ ಶ್ರವಣಬೆಳ್ಗೊಳವು ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯಲ್ಲಿದೆ. ಐತಿಹಾಸಿಕ ಮತ್ತು ಧಾರ್ಮಿಕ ಮಹತ್ವದ ಪುಟ್ಟ ಪಟ್ಟಣವಾದ ಶ್ರವಣಬೆಳ್ಗೊಳವು ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯಲ್ಲಿದೆ.

ಸಾವಿನ ಮೇಜವಾನಿ

ದೋಣಿ ಸಾಗಲಿ! “ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ ಬೀಸುಗಾಳಿಗೆ ಬೀಳುತೇಳುತ ತೆರೆಯ ಮೇಗಡೆ ಹಾರಲಿ” ದೋಣಿ ಸಾಗಲಿ! “ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ ಬೀಸುಗಾಳಿಗೆ ಬೀಳುತೇಳುತ ತೆರೆಯ ಮೇಗಡೆ ಹಾರಲಿ”

ಸಾವಿರ ಹಾಡಿನ ಸರದಾರ ಬೀರಪ್ಪ ಗೋಟೂರ

ಒಂದು ನಾಡಿನ ಬದುಕಿನಲ್ಲಿ ರಂಗಭೂಮಿಗೆ ಪ್ರಮುಖವಾದ ಸ್ಥಾನವಿದೆ. ಒಂದು ನಾಡಿನ ಬದುಕಿನಲ್ಲಿ ರಂಗಭೂಮಿಗೆ ಪ್ರಮುಖವಾದ ಸ್ಥಾನವಿದೆ.

ಸಾಂಸ್ಕೃತಿಕ ಧ್ರುವ ತಾರೆಗಳು

ಸಂಗೀತವೆಂದರೆ ತಪಸ್ಸು. ಅದನ್ನು ತ್ರಿಕರಣಶುದ್ಧವಾಗಿ ಸಾಧಿಸಿದಾಗ, ಸಮರ್ಥ ಗುರುವಿನ ಕೃಪಾಶೀರ್ವಾದ ಲಭಿಸಿದಾಗ ಸಂಗೀತದಲ್ಲಿ ಸಾಧನೆ ಸಾಧ್ಯ ಎಂದು ನಂಬಿ ತಪಗೈದು, ಸಂಗೀತವೆಂದರೆ ತಪಸ್ಸು. ಅದನ್ನು ತ್ರಿಕರಣಶುದ್ಧವಾಗಿ ಸಾಧಿಸಿದಾಗ, ಸಮರ್ಥ ಗುರುವಿನ ಕೃಪಾಶೀರ್ವಾದ ಲಭಿಸಿದಾಗ ಸಂಗೀತದಲ್ಲಿ ಸಾಧನೆ ಸಾಧ್ಯ ಎಂದು ನಂಬಿ ತಪಗೈದು,

ಸಾಹಿತ್ಯ ಮತ್ತು ಸಂಸ್ಕೃತಿ

ರಾಜ್ಯದ ಆಗ್ನೇಯ ಭಾಗದಲ್ಲಿರುವ ತುಮಕೂರು ಜಿಲ್ಲೆಯು ವಿಶಾಲವಾದ ಬಯಲು ಪ್ರದೇಶದಿಂದ ಕೂಡಿದ್ದು ಇಲ್ಲಿಯ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಗಳು ವೈವಿಧ್ಯ ಶಿಲ್ಪಕಲೆ, ಸಂಗೀತ, ಸಾಹಿತ್ಯ, ನೃತ್ಯ ಮುಂತಾದ ಲಲಿತ ಕಲೆಗಳ ಬೀಡೆನಿಸಿದ್ದು ಜನಪದ, ಯಕ್ಷಗಾನ, ರಂಗಭೂಮಿಗಳ ತ್ರಿವೇಣಿ ಸಂಗಮವಾಗಿದೆ. “ಕಲ್ಪತರು ನಾಡು” ಎಂಬ ಅನ್ವರ್ಥನಾಮವನ್ನು ಹೊಂದಿದ್ದು ಗಂಗರಸ ದುರ್ವಿನೀತನ ಕಾಲದ ತಾಮ್ರಶಾಸನವೊಂದರಲ್ಲಿ ಉಲ್ಲೇಖಿತವಾಗಿರುವಂತೆ ‘ಸುಜನ ಜನಪದ’ರೆಂಬ ನುಡಿಗಟ್ಟನ್ನು ಅರ್ಥವತ್ತಾಗಿಸಿದೆ. ಕರ್ನಾಟಕದ ಪ್ರಮುಖ ರಾಜಮನೆತನವಾದ ಗಂಗರ ಆಳ್ವಿಕೆಗೆ ಜಿಲ್ಲೆಯ ದಕ್ಷಿಣಭಾಗವು ಒಳಪಟ್ಟಿದ್ದು ಅವರ ಕಾಲದ ಶಾಸನ, ವಾಸ್ತುಶಿಲ್ಪಗಳು ಇಂದಿಗೂ ಉಳಿದು ಬಂದಿವೆ. ಈ ಮನೆತನದೊಂದಿಗೆ ರಕ್ತಸಂಬಂಧವಿರಿಸಿಕೊಂಡಿದ್ದ ನೊಳಂಬರು ಜಿಲ್ಲೆಯ ಪೂರ್ವಭಾಗದ ಮೇಲೆ ನಿಯಂತ್ರಣ ಹೊಂದಿದ್ದು, ಆ ಭಾಗದಲ್ಲಿ ರಾಜಕೀಯ ಚಟುವಟಿಕೆಯಲ್ಲಿ ತೊಡಗಿದ್ದು ಶಾಸನೋಕ್ತವಾಗಿವೆ. ನೊಳಂಬರ ರಾಜಧಾನಿಯಾಗಿದ್ದ ಹೇಮಾವತಿಯು (ಹೆಂಜೇರು–ಮಡಕಶಿರಾ ತಾಲೂಕು, ಅನಂತಪುರ ಜಿಲ್ಲೆ, ಆಂಧಪ್ರದೇಶ) ಹಿಂದೆ, ತುಮಕೂರು ಜಿಲ್ಲೆಯಲ್ಲಿಯೇ ಇದ್ದು, ಜಿಲ್ಲೆಯ ಹಲವೆಡೆ ನೊಳಂಬರ ವಾಸ್ತುಶಿಲ್ಪ ಪ್ರಭಾವ ಕಂಡುಬರುತ್ತದೆ. ರಾಷ್ಟ್ರಕೂಟ ಕೃಷ್ಣನ ಗುಬ್ಬಿ ತಾಮ್ರಶಾಸನವು ಅವರ ವಂಶಾವಳಿ ಹಾಗೂ ಎಲ್ಲೋರಾದಲ್ಲಿ ನಿರ್ಮಾಣಗೊಂಡ ದೇವಾಲಯದ ಬಗ್ಗೆ ಮಾಹಿತಿಯನ್ನು ಒದಗಿಸುವ ಅಪೂರ್ವ ಶಾಸನವಾಗಿದೆ.

ಸಾಹಿತ್ಯ ಮತ್ತು ಸಂಸ್ಕೃತಿ

ಕರ್ನಾಟಕದ ಸಾಂಸ್ಕೃತಿಕ ಪರಂಪರೆಯು ಶ್ರೀಮಂತವೂ, ವೈವಿಧ್ಯಪೂರ್ಣವೂ ಆಗಿದ್ದು ‘ಬಹುಮುಖಿ ಸಂಸ್ಕೃತಿ’ ಎಂದು ಹೆಸರು ಪಡೆದಿದೆ. ಕನ್ನಡ ಸಾಹಿತ್ಯದಲ್ಲಿ ದೊರೆತಿರುವ ಪ್ರಥಮ ಕೃತಿ ಸುಮಾರು ೯ನೇ ಶತಮಾನದ್ದಾಗಿದೆ. ಈ ಆಧುನಿಕ ಕಾಲಮಾನದಲ್ಲಿ ತಮ್ಮ ಸಾಹಿತ್ಯಿಕ ಸೃಜನಶೀಲ ಪ್ರತಿಭೆಗಾಗಿ ಎಂಟು ಜನ ಮಹನೀಯರು ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದಿದ್ದಾರೆ.

ಸಾಹಿತ್ಯರತ್ನ ಸಂಪುಟ

ನಂಬಿದರೆ ನಂಬಿ, ಬಿಟ್ಟರೆ ಬಿಡಿ. ಕನ್ನಡ ಕೃತಿಯೊಂದಕ್ಕೆ ಮೊದಲು ಡಾಕ್ಟರೇಟ್‌ ಬಂದದ್ದು ನೂರ ಏಳು ವರ್ಷಗಳ ಹಿಂದೆ. ನಂಬಿದರೆ ನಂಬಿ, ಬಿಟ್ಟರೆ ಬಿಡಿ. ಕನ್ನಡ ಕೃತಿಯೊಂದಕ್ಕೆ ಮೊದಲು ಡಾಕ್ಟರೇಟ್‌ ಬಂದದ್ದು ನೂರ ಏಳು ವರ್ಷಗಳ ಹಿಂದೆ.

ಸಿ. ಜಿ. ಕೃಷ್ಣಸ್ವಾಮಿ

ಸಿ. ಜಿ. ಕೆ. – ಕೃಷ್ಣಸ್ವಾಮಿ ಆಧುನಿಕ ಕನ್ನಡ ರಂಗಭೂಮಿಯ ಖ್ಯಾತ ರಂಗ ನಿರ್ದೇಶಕರು. ರಂಗ ಸಂಘಟಕರಾಗಿ, ರಂಗ ನಿರ್ದೇಶಕರಾಗಿ, ಬೆಳಕಿನ ವಿನ್ಯಾಸಕಾರರಾಗಿ ಹಾಗೂ ಪ್ರಗತಿಪರ ಚಿಂತಕರಾಗಿ ವಿಶಿಷ್ಟ ಸ್ಥಾನ, ಮಾನ ಗಳಿಸಿಕೊಂಡಿದ್ದಾರೆ. ಯಾವುದೇ ಶಾಸ್ತ್ರೀಯ ರಂಗತರಬೇತಿ, ಔಪಚಾರಿಕ ಅಧ್ಯಯನ ಇಲ್ಲದೆ, ಸ್ವಂತ ಪ್ರತಿಭೆ, ಪರಿಶ್ರಮ ಮತ್ತು ಕಲ್ಪಕತೆಗಳ ಮೇಲೆ ತಮ್ಮ ವ್ಯಕ್ತಿತ್ವವನ್ನು ರೂಢಿಸಿಕೊಂಡವರು.

ಸಿಕ್ಲಿಗರ

ಈಗಾಗಲೇ ಹಲವಾರು ಬುಡಕಟ್ಟು ಸಮುದಾಯಗಳ ಕುರಿತಾಗಿ ಅಧ್ಯಯನಗಳು ನಡೆದಿದೆ. ಆದರೆ ಅಧ್ಯಯನ ನಡೆಯಬೇಕಾದ ಸಮುದಾಯಗಳು ಸಾಕಷ್ಟಿವೆ. ಅಂತಹ ಸಮುದಾಯಗಳಲ್ಲಿ ಸಿಕ್ಲಿಗರ ಸಮುದಾಯವು ಒಂದಾಗಿದೆ. ಇವರಿಗೆ ಸಿಕ್ಲಿಗರೆಂದು ಜಾತಿ ಪ್ರಮಾಣ ಪತ್ರವನ್ನು ನೀಡುತ್ತಿಲ್ಲ. ಕಾರಣ ಸ್ವತಂತ್ರ ಭಾರತದ ಕರ್ನಾಟಕ ರಾಜ್ಯದಲ್ಲಿ ಇವರನ್ನು ಮೀಸಲಾತಿಯ ಯಾವುದೇ ಪಟ್ಟಿಗೂ ಇದುವರೆಗೂ ಸೇರಿಸಿರುವುದಿಲ್ಲ. ಮೊದಲಿಗೆ ಇವರನ್ನು ಅಪರಾಧಿ ವರ್ಗಕ್ಕೆ ಸೇರಿಸಲಾಗಿತ್ತು. ಏಕೆಂದರೆ ಇವರು ತಲವಾರ, ಖಡ್ಗ, ಚಾಕು, ಚೂರಿಗಳನ್ನು ತಯಾರಿಸುವುದರಿಂದ ಹೆಚ್ಚು ಜನರು ಇವರನ್ನು ಅನುಮಾನದಿಂದಲೆ ನೋಡುತ್ತಿದ್ದರು.

ಸಿದ್ಧನಾಥ ಬಳ್ಳಾರಿ

ಡಾ|| ಬಳ್ಳಾರಿ ಸಿದ್ಧನಾಥ ಅವರ ಹುಟ್ಟೂರು ಹಗರಿಬೊಮ್ಮನಹಳ್ಳಿ. ಅವರ ಮನೆತನದ ಮೂಲಪುರುಷರು ಬಳ್ಳಾರಿಯವರಾಗಿದ್ದು, ಅಲ್ಲಿಂದ ಹಗರಿಬೊಮ್ಮನಹಳ್ಳಿಗೆ ಬಂದಿರಬೇಕು. ಅಂತೆಯೇ ಅವರ ಮನೆತನಕ್ಕೆ ‘ಬಳ್ಳಾರಿ’ ಯೆಂಬ ಹೆಸರು ಬಂದಿರಬೇಕು. ಅವರ ತಂದೆ ರೇವಪ್ಪ ಹಿರಿಯರಿಂದ ಬಂದ ಕಾಯಕವಾದ ಒಕ್ಕಲುತನವನ್ನೇ ಮುಂದುವರೆಸಿಕೊಂಡು ಬಂದ ಶರಣಜೀವಿಯಾಗಿದ್ದನು.

ಸುಕ್ರಿಬೊಮ್ಮಗೌಡ

ಆಧುನಿಕ ಸಮಾಜ ಶಾಸ್ತ್ರಜ್ಞರು ಗುರುತಿಸಿರುವಂತಹ ಬುಡಕಟ್ಟು ಸಂಸ್ಕೃತಿಯ ಬಹುಪಾಲು ಲಕ್ಷಣಗಳನ್ನು ಇಂದಿನವರೆಗೂ ಉಳಿಸಿಕೊಂಡು ಉತ್ತರ ಕನ್ನಡ ಜಿಲ್ಲೆಯ ಕಾರವಾರ ಅಂಕೋಲಾ, ಕುಮುಟಾ, ಹೊನ್ನಾವರ ತಾಲ್ಲೂಕುಗಳಲ್ಲಿ ನೆಲೆಸಿರುವ ಆಧುನಿಕ ಸಮಾಜ ಶಾಸ್ತ್ರಜ್ಞರು ಗುರುತಿಸಿರುವಂತಹ ಬುಡಕಟ್ಟು ಸಂಸ್ಕೃತಿಯ ಬಹುಪಾಲು ಲಕ್ಷಣಗಳನ್ನು ಇಂದಿನವರೆಗೂ ಉಳಿಸಿಕೊಂಡು ಉತ್ತರ ಕನ್ನಡ ಜಿಲ್ಲೆಯ ಕಾರವಾರ ಅಂಕೋಲಾ, ಕುಮುಟಾ, ಹೊನ್ನಾವರ ತಾಲ್ಲೂಕುಗಳಲ್ಲಿ ನೆಲೆಸಿರುವ

ಸುಗಮ ಸಂಗೀತ ಒಂದು ಸಿಂಹಾವಲೋಕನ

ಭಾರತ ಅನೇಕ ಭಿನ್ನ ಭಿನ್ನ ಸಂಸ್ಕೃತಿಗಳ ತವರು. ಇಲ್ಲಿ ಹಲವು ಹತ್ತು ಭಾಷೆಗಳಿವೆ. ಜಾತಿಮತಗಳಿವೆ. ಹಲವು ಧರ್ಮಗಳ ನೆಲೆವೀಡಾಗಿದೆ ಭಾರತ. ಅಲ್ಲದೆ ಭಕ್ತಿಪಂಥವೂ ಹಲವಾರು. ಧರ್ಮಗುರುಗಳೂ ಅನೇಕರಾಗಿ ಹೋಗಿದ್ದಾರಿಲ್ಲಿ. ದ್ವೈತ, ಅದ್ವೈತ, ವಿಶಿಷ್ಟಾದ್ವೈತಗಳ ತವರೂ ಇದೆ. ಹರಭಕ್ತಿ ಇದೆ. ಹರಿಭಕ್ತಿ ಇದೆ. ಹಾಗಾಗಿ ನಂಬಿಕೆಗಳು ಹಲವಾರು ಮೈದಳೆದು ನಿಂತಿದೆ ಇಲ್ಲಿ.

ಸುಡುಗಾಡು ಸಿದ್ಧ

ಸಮಾಜಶಾಸ್ತ್ರಜ್ಞರು, ಮಾನವಶಾಸ್ತ್ರಜ್ಞರು, ಜನಪದ ತಜ್ಞರು ಹೀಗೆ ನಾನಾ ನಮೂನೆಯ ವಿದ್ವಾಂಸರು ಹಿಂದಿನಿಂದಲೂ ಸಮುದಾಯಗಳ ಅಧ್ಯಯನಗಳನ್ನು ನಡೆಸುತ್ತಲೇ ಬಂದಿದ್ದಾರೆ. ಈ ವಿದ್ವಾಂಸರ ಅಧ್ಯಯನಗಳಲ್ಲಿ ಯಾವುದೋ ಒಂದು ಕೊರತೆಯಂತೂ ಕಂಡುಬರುತ್ತದೆ. ಎಷ್ಟೋ ಬಾರಿ ವಿದ್ವಾಂಸರಿಗೆ ಮಾಹಿತಿ ನೀಡುವಾಗ ಸಮುದಾಯದ ಮಾಹಿತಿದಾರರು ಸಂಕೋಚಪಟ್ಟು ಮಾಹಿತಿಗಳನ್ನು ಪೂರ್ಣವಾಗಿ ಕೊಡದೇ ಹೋಗುವ ಸಾಧ್ಯತೆಗಳಿರುತ್ತವೆ.

ಸುಡುಗಾಡು ಸಿದ್ಧರು

ಸುಡುಗಾಡು ಸಿದ್ಧರ ವಿಷಯದಲ್ಲಿಯೇ ಚಿಂತನೆಯೊಂದು ನಡೆಯುತ್ತಿರುವುದು ತುಂಬಾ ಆರೋಗ್ಯಕರವಾದ ಸಂಗತಿ. ಈ ಆಧುನಿಕವಾದ ಜೀವನ ಪ್ರಕಾರಗಳ ನಡುವೆ ಇಂಥ ಒಂದು ಜನಾಂಗ ಈಗಲೂ ಅಸ್ತಿತ್ವದಲ್ಲಿದೆ ಎಂಬುದನ್ನು ಊಹಿಸುವುದೂ ಕಷ್ಟಸಾಧ್ಯ. ಇಂದಿಗೂ ಅವರು ತಮ್ಮ ಪ್ರತ್ಯೇಕತೆಯನ್ನು ಕಾಪಾಡಿಕೊಂಡು ಬಂದಿದ್ದಾರೆಂಬುದು ವಿಸ್ಮಯದ ಸಂಗತಿ.

ಸುವರ್ಣ ಕರ್ನಾಟಕ ರಾಜಕೀಯ ಸಿಂಹಾವಲೋಕನ

ಭಾರತ ೧೯೪೭ರ ಆಗಸ್ಟ್‌ ೧೫ರಂದು ಸ್ವತಂತ್ರವಾಯಿತೇನೋ ನಿಜ. ಆದರೆ ಮೈಸೂರು ಸಂಸ್ಥಾನ ಮಾತ್ರ ‘ಪ್ರಭುತ್ವ’ದಿಂದ ‘ಪ್ರಜಾಪ್ರಭುತ್ವ’ಕ್ಕೆ ಪರಿವರ್ತನೆಗೊಳ್ಳಲು ಒಂದೆರಡು ತಿಂಗಳು ಕಾಯಬೇಕಾಯಿತು. ಭಾರತ ೧೯೪೭ರ ಆಗಸ್ಟ್‌ ೧೫ರಂದು ಸ್ವತಂತ್ರವಾಯಿತೇನೋ ನಿಜ. ಆದರೆ ಮೈಸೂರು ಸಂಸ್ಥಾನ ಮಾತ್ರ ‘ಪ್ರಭುತ್ವ’ದಿಂದ ‘ಪ್ರಜಾಪ್ರಭುತ್ವ’ಕ್ಕೆ ಪರಿವರ್ತನೆಗೊಳ್ಳಲು ಒಂದೆರಡು ತಿಂಗಳು ಕಾಯಬೇಕಾಯಿತು.