Provisional Premium Books
Showing 10471–10484 of 10484 results
ಹೃದಯಾಘಾತ ಚಿಕಿತ್ಸೆ ಹಾಗೂ ನಿವಾರಣೆ
ಸಾಮಾನ್ಯವಾಗಿ ಹೃದಯವು ಪ್ರೇಮ, ಪ್ರೀತಿ, ವಿಶ್ವಾಸ, ಭಾವನೆಗಳ ಕುರುಹಾಗಿದೆ. ಆದರೆ ವಾಸ್ತವವಾಗಿ ಹೃದಯವು ರಕ್ತವನ್ನು ದೇಹಕ್ಕೆ ಪೂರೈಸುವ ಒಂದು ಅದ್ಭುತವಾದ ಯಂತ್ರವಾಗಿದೆ. ಹೃದಯವು ನಮ್ಮ ಎದೆ ಗೂಡಿನ ಮಧ್ಯ ಹಾಗೂ ಎಡಭಾಗದಲ್ಲಿದ್ದು, ನಮ್ಮ ಕೈ ಮುಷ್ಠಿಯಷ್ಟುಗಾತ್ರದ್ದಾಗಿದೆ. ಅದರ ತೂಕವು ಸುಮಾರು 250-300 ಗ್ರಾಂಗಳಷ್ಟು. ಹೃದಯದ ಎಡ ಮತ್ತು ಬಲ ಭಾಗಗಳಲ್ಲಿ ಶ್ವಾಸಕೋಶಗಳಿದ್ದು, ಅದರ ಹಿಂದೆ ಬೆನ್ನು ಮೂಳೆಗಳಿದ್ದು, ಮುಂದೆ ಎದೆಗೂಡಿನ ಮೂಳೆಗಳಿರುತ್ತವೆ.
ಹೆಚ್. ಜಿ. ಸೋಮಶೇಖರರಾವ್
ಕನ್ನಡ ನಾಡು ವೀರರ, ತ್ಯಾಗವೀರರ ತವರಾಗಿರುವಂತೆಯೇ ಕವಿಕಲಾವಿದರ ಬೀಡಾಗಿದೆ. ಲಲಿತಕಲೆಗಳಲ್ಲಿ ರಮಣೀಯವೆನಿಸಿದ ನಾಟಕಕಲೆಯ ಶ್ರೀಮಂತಿಕೆಯನ್ನು ಹಚ್ಚಿಸಿದ ಅನೇಕ ಕಲಾಶ್ರೇಷ್ಠರು ನಮ್ಮಲ್ಲಿ ಆಗಿಹೋಗಿದ್ದಾರೆ. ಅತ್ಯಂತ ಪ್ರಾಚೀನವಾದ ಈ ಜೀವಂತ ಕಲೆಗಾಗಿ ತಮ್ಮ ಇಡೀ ಜೀವಿತವನ್ನೆ ಮುಡುಪಿಟ್ಟ ರಂಗಸಂಪನ್ನರಿದ್ದಾರೆ. ಅವರು ನಾಟಕರಂಗದಲ್ಲಿ ಹೊಸ ಹೊಸ ಪ್ರಯೋಗಗಳನ್ನು ನಡೆಸಿ ಅದನ್ನು ಕಾಲೋಚಿತಗೊಳಿಸಿದ್ದಾರೆ.
ಹೆಳವರು
ಅಲೆಮಾರಿಗಳಾಗಿ ಊರೂರು ಅಲೆಯುತ್ತ ತಮ್ಮ ಕಸುಬುಗಳನ್ನು ಮಾಡಿ ಹೊಟ್ಟೆ ಹೊರೆಯುವ ಹತ್ತು ಹಲವು ಸಮುದಾಯಗಳನ್ನು ಕರ್ನಾಟಕದಲ್ಲಿ ಕಾಣಬಹುದು. ಅಂತಹ ಸಮುದಾಯಗಳಲ್ಲಿ ಹೆಳವರದೂ ಒಂದು ವಿಶಿಷ್ಟ ಸಮೂಹ. ಬೇರೆ ಬೇರೆ ಸಮುದಾಯಗಳ ಕುಲಗಳನ್ನು ಕೊಂಡಾಡಿ ಪ್ರಭಾವಶಾಲಿ ಮನೆತನಗಳ ವಂಶಾವಳಿಯನ್ನು ಕಾಲಾಂತರದಲ್ಲಿ ಚಪ್ಪೋಡುಗಳಲ್ಲಿ ದಾಖಲೆಗೊಳಿಸಿ ಕಾಪಾಡಿಕೊಂಡು ಬಂದ ಹಿರಿಮೆ ಹೆಳವರದ್ದಾಗಿದೆ.
ಹೇಮಚಂದ್ರ
ಹೇಮಚಂದ್ರನ ಜನನ ಗುಜರಾತಿನ ಅಹಮದಾಬಾದಿಗೆ 20 ಮೈಲಿ ದೂರದಲ್ಲಿರುವ ದುಂಧುಕಾ ನಗರದಲ್ಲಿ ಕ್ರಿ. ಶ. 1089ರಲ್ಲಿ ಕಾರ್ತಿಕ ಪೌರ್ಣಮಿ ರಾತ್ರಿ ಆಯಿತು. ಈ ದುಂಧುಕಾ ಸುಪ್ರಸಿದ್ಧ ಹಾಗೂ ಸಮೃದ್ಧ ನಗರವಾಗಿತ್ತು. ಈ ನಗರದಲ್ಲದ್ದ ಮೋಡ ವಂಶೀಯ ಮನೆತನದಲ್ಲಿ ಹೇಮಚಂದ್ರನ ಜನನವಾಯಿತು. ಅವನು ಬಾಚಿಗ ಹಾಗೂ ಪಾಹಿಣಿದೇವಿಯರ ಮಗ. ಈಗಲೂ ಈ ಮೋಡ ವಂಶೀಯ ವೈಶ್ಯರನ್ನು ಮೋಡಬನಿಯ ಎಂದು ಕರೆಯುತ್ತಾರೆ.
ಹೊಸ್ತೋಟ ಮಂಜುನಾಥ ಭಾಗವತ
ಬದುಕಿಗಾಗಿ ಯಕ್ಷಗಾನವನ್ನೇ ಆಧರಿಸಿದವರು ಅನೇಕ ಜನ. ಆದರೆ ಯಕ್ಷಗಾನಕ್ಕಾಗಿಯೇ ತನ್ನ ಬದುಕನ್ನು ಮುಡಿಪಾಗಿಟ್ಟವರು, ಅದರಲ್ಲಿಯೇ ತನ್ನ ಬದುಕಿನ ಸಾರ್ಥಕತೆಯನ್ನು ಕಂಡುಕೊಂಡವರು ಹೊಸ್ತೋಟ ಮಂಜುನಾಥ ಭಾಗವತರು.
ಬದುಕಿಗಾಗಿ ಯಕ್ಷಗಾನವನ್ನೇ ಆಧರಿಸಿದವರು ಅನೇಕ ಜನ. ಆದರೆ ಯಕ್ಷಗಾನಕ್ಕಾಗಿಯೇ ತನ್ನ ಬದುಕನ್ನು ಮುಡಿಪಾಗಿಟ್ಟವರು, ಅದರಲ್ಲಿಯೇ ತನ್ನ ಬದುಕಿನ ಸಾರ್ಥಕತೆಯನ್ನು ಕಂಡುಕೊಂಡವರು ಹೊಸ್ತೋಟ ಮಂಜುನಾಥ ಭಾಗವತರು.