ಇತಿಹಾಸ
ಭೌಗೋಳಿಕವಾಗಿ ದಕ್ಷಿಣ ಭಾರತದ ನೈಋತ್ಯ ಭಾಗದಲ್ಲಿರುವ ಕರ್ನಾಟಕ ರಾಜ್ಯವು ಅಪಾರ ನೈಸರ್ಗಿಕ ಸಂಪತ್ತನ್ನು ಹೊಂದಿದೆ. ಈ ರಾಜ್ಯದ ಪಶ್ಚಿಮ ಘಟ್ಟಗಳಲ್ಲಿ ಶ್ರೀಮಂತವಾದ ಅರಣ್ಯ ಸಂಪತ್ತು ಹಾಗೂ ಸಮತಟ್ಟಾದ ಕಣಿವೆಗಳಿವೆ. ಜೊತೆಗೆ ಅದಕ್ಕೆ ಮುಕುಟಪ್ರಾಯವಾಗಿ ಹೆಚ್ಚು ಸಂಪದ್ಭರಿತ ಆದರೆ ಇಕ್ಕಟ್ಟಾದ ಕರಾವಳಿ ತೀರ ಪ್ರದೇಶವೂ ಇದೆ. ನವಮಂಗಳೂರು ಬಂದರಿನ ಮೂಲಕ ಅಂತಾರಾಷ್ಟ್ರೀಯ ವಾಣಿಜ್ಯ ಹಾಗೂ ಅಧಿಕ ವಿದೇಶಿ ವಿನಿಮಯ ಗಳಿಕೆಯಿಂದಾಗಿ ತನ್ನ ಮೌಲ್ಯವನ್ನು ಕರ್ನಾಟಕವು ಹೆಚ್ಚಿಸಿಕೊಂಡಿದೆ. ಇವೆಲ್ಲದರ ಜೊತೆಗೆ, ಈ ರಾಜ್ಯಕ್ಕೆ ಐತಿಹಾಸಿಕ ಮಹತ್ವವುಳ್ಳ, ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಪೌರಾಣಿಕ ಕಥಾನಕಗಳ ಹಿನ್ನೆಲೆಯೂ ಇದೆ.
Publication Language |
Kannada |
---|---|
Publication Type |
eBooks |
Publication License Type |
Premium |
Publication Author |
ನೀಲಾ ಮಂಜುನಾಥ್ |
Publisher |
ಕರ್ನಾಟಕ ಸರ್ಕಾರ |
SKU:
Kaipidi-2.pdf
Categories: Books, Kannada Books, Provisional Premium Books
Tag: Kannada Rare Books