ಚೆಲುವ ಕನ್ನಡ ನಾಡು
ಕರ್ನಾಟಕ ಎಂದರೆ ಒಂದು ನಂದನ. ಸ್ವರ್ಗದ ಹಾದಿ ಈ ನೆಲದಲ್ಲಿಯೇ ಹುಟ್ಟಿ ಇಲ್ಲಿಯೇ ಮುಗಿಯುತ್ತದೆ. ಕವಿ ಹೇಳುವಂತೆ ಇದು ಚೆಲುವ ಕನ್ನಡ ನಾಡು. ‘ಚೆಲುವು’ ಎಂಬುದು ನಿಶ್ಚಿತವಾದ ಒಂದೇ ಅರ್ಥಕ್ಕೆ ಅಂಟಿಕೊಂಡ ಮಾತಲ್ಲ. ಆ ಮಾತಿನಲ್ಲಿ ಸೌಂದರ್ಯ, ಲಾಲಿತ್ಯ, ಲಾವಣ್ಯಗಳೆಲ್ಲ ಮುಪ್ಪುರಿಗೊಂಡಿವೆ. ಕನ್ನಡದಲ್ಲಿ ನಿರಾಬರಣ ಸುಂದರಿಗೆ ‘ಚೆಲುವೆ’ ಎನ್ನುತ್ತಾರೆ. ಆಕೆ ಮನಸ್ಸನ್ನು ಆಹ್ಲಾದಗೊಳಿಸುವಂತಹ ಹೆಣ್ಣು; ಅಂದ ಚೆಂದಗಳಿಂದ. ಶಾಂತಿ ತೃಪ್ತಿಗಳಿಂದ ಮೈತುಂಬಿಕೊಂಡ ಲಾವಣ್ಯವತಿ. ಹೀಗೆ. ‘ಚೆಲುವು’ ಎಂದರೆ ಹತ್ತು ಅರ್ಥಗಳನ್ನು ಹೊಮ್ಮಿಸುವ ಒಂದು ಪದ.
Publication Language |
Kannada |
---|---|
Publication Type |
eBooks |
Publication License Type |
Premium |
Publication Author |
ಎಂ.ವಿ.ಕಾಮತ್/ಡಾ ,ಎಚ್.ಕೆ.ರಂಗನಾಥ್ |
Publisher |
ಕರ್ನಾಟಕ ಸರ್ಕಾರ |
Kindly Register and Login to Tumakuru Digital Library. Only Registered Users can Access the Content of Tumakuru Digital Library.