ನುಡಿಶೋಧ
ಕವಿ ನಾರಣಪ್ಪ ಅಥಮಾ ಕುಮಾರವ್ಯಾಸನ ಕಾಲವನ್ನು ವಿದ್ವಾಂಸರು ಹಲವು ಆಧಾರಗಳ ಮೇಲೆ ಕ್ರಿ. ಶ. 1450 ಎಂದು ಗುರುತಿಸುತ್ತಾರೆ. ಕವಿಯ ಹುಟ್ಟು ಸ್ಥಳ ಗದುಗು ಪ್ರದೇಶದ ಕೋಳಿವಾಡ ಎಂತಲೂ ತಿಳಿದು ಬಂದಿದೆ. ಕವಿಯೇ ಗದುಗಿನ ವೀರನಾರಾಯಣ ದೇವರನ್ನು ಅನನ್ಯವಾಗಿ ಸ್ತುತಿಸುವುದರಿಂದ ಆತ ಜೀವಿಸಿದ್ದ ಸ್ಥಳದ ಬಗ್ಗೆ ಯಾವ ಅನುಮಾನವೂ ಇಲ್ಲ. ನಾರಣಪ್ಪನು ತನ್ನನ್ನು ಆಯಾ ಪರ್ವದ ಅಂತ್ಯದೊಳಗೆ ‘ಶ್ರೀಮತ್ಕುಮಾರವ್ಯಾಸ ಯೋಗೀಂದ್ರ’ ಎಂತಲೇ ಕರೆದುಕೊಂಡಿರುವುದರಿಂದ ಆತ ದೇಶ ಸಂಚಾರ ಕೈಗೊಂಡ ಸನ್ಯಾಸಿಯೂ, ಅನುಭವಿಯೂ, ಆಧ್ಯಾತ್ಮಿಯೂ ಆಗಿದ್ದಿರಬೇಕು.
Publication Language |
Kannada |
---|---|
Publication Type |
eBooks |
Publication License Type |
Premium |
Publication Author |
ಕೃಷ್ಣಮೂರ್ತಿ ಹನೂರು |
Publisher |
ಕನ್ನಡ ಪುಸ್ತಕ ಪ್ರಾಧಿಕಾರ |