ಪ್ರಾಸ್ತಾವಿಕ
ಕರ್ನಾಟಕವು ಸಂಪದ್ಭರಿತ ಪರಂಪರೆಯನ್ನು ಹೊಂದಿದ್ದು, ಅದರ ಪ್ರಾಕೃತಿಕ ಸಂಪತ್ತು ಉಜ್ವಲ ಭವಿಷ್ಯವನ್ನು ರೂಪಿಸಲು ನಾಡಿನ ಜನತೆಗೆ ಸ್ಫೂರ್ತಿದಾಯಕವಾಗಿದೆ. ಅದರ ವಿಶೇಷ ಭೌಗೋಳಿಕ ಸನ್ನಿವೇಶ, ನೈಸರ್ಗಿಕ ಸಂಪತ್ತು ಅಂದರೆ, ಇಲ್ಲಿನ ನದಿಗಳು, ಬೆಟ್ಟಗಳು, ಕಣಿವೆಗಳು, ಮೈದಾನಗಳು, ಅರಣ್ಯಗಳು ಮತ್ತು ಇತರ ಸಂಪನ್ಮೂಲಗಳು ವೈವಿಧ್ಯತೆಯಿಂದ ಕೂಡಿದ್ದು ಹೇರಳವಾಗಿವೆ. ಹಾಗೆಯೇ ರಾಜ್ಯವು ಪ್ರೇಕ್ಷಣೀಯ ಸ್ಥಳಗಳಿಗೂ ಮತ್ತು ಕೈಗಾರಿಕಾ ಸಂಪನ್ಮೂಲಕ್ಕೂ ಅಷ್ಟೇ ಹೆಸರುವಾಸಿಯಾಗಿದೆ. ಸುಮಾರು ಎರಡು ಸಾವಿರ ವರ್ಷಗಳಷ್ಟು ದೀರ್ಘಕಾಲದ ಐತಿಹಾಸಿಕ ಪರಂಪರೆಯನ್ನುಳ್ಳ ಈ ನಾಡಿನಲ್ಲಿ ಪ್ರಾಮುಖ್ಯತೆಯನ್ನು ಪಡೆದಿರುವ ಅನೇಕ ಸುಂದರವಾದ ಕೋಟೆಗಳು, ಕೆರೆಗಳು, ದೇವಾಲಯಗಳು, ಮಸೀದಿಗಳು ಮತ್ತು ನಗರ/ಪಟ್ಟಣಗಳನ್ನು ಕಾಣಬಹುದು. ಅನೇಕ ಪಟ್ಟಣಗಳು ಪ್ರಮುಖ ಕೈಗಾರಿಕಾ, ವಾಣಿಜ್ಯ ಮತ್ತು ಶೈಕ್ಷಣಿಕ ಕೇಂದ್ರಗಳಾಗಿ ಬೆಳೆದಿವೆ. ಅವುಗಳಿಗೆ ಎಲ್ಲ ವಿಧವಾದ ಆಧುನಿಕ ಸವಲತ್ತುಗಳನ್ನೂ ಒದಗಿಸಲಾಗಿದೆ.
Publication Language |
Kannada |
---|---|
Publication Type |
eBooks |
Publication License Type |
Premium |
Publication Author |
ನೀಲಾ ಮಂಜುನಾಥ್ |
Publisher |
ಕರ್ನಾಟಕ ಸರ್ಕಾರ |
SKU:
Kaipidi-1.pdf
Categories: Books, Kannada Books, Provisional Premium Books
Tag: Kannada Rare Books