Book Review

ಸಂಕೀರ್ಣ ಮಹಾಭಾರತಕ್ಕೊಂದು ವಿಭಿನ್ನ ವಿಶ್ಲೇಷಣೆ ಎಂಬ ತಲೆಬರಹದಿಂದಲೇ ದ್ವಾಪರ ಕಾದಂಬರಿ ಪುಸ್ತಕ ವಿಮರ್ಶೆ

ಸಿ.ಜಿ.ವೆಂಕಟೇಶ್ವರ, ಸಮಾಜ ವಿಜ್ಞಾನ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಕ್ಯಾತಸಂದ್ರ
ತುಮಕೂರು

ಕಂನಾಡಿಗ ನಾರಾಯಣ ರವರು ಬರೆದಿರುವ ದ್ವಾಪರ  ಪುಸ್ತಕ ಓದುತ್ತಾ ಹೋದಂತೆಲ್ಲಾ ನಮ್ಮಲ್ಲಿ ವೈಚಾರಿಕ ಚಿಂತನೆ ಜಾಗೃತವಾಗುತ್ತಾ ಹೋಗುತ್ತದೆ. ಸಂಕೀರ್ಣ ಮಹಾಭಾರತಕ್ಕೊಂದು ವಿಭಿನ್ನ ವಿಶ್ಲೇಷಣೆ  ಎಂಬ ತಲೆ ಬರಹ ಓದುತ್ತಲೆ ಓದುಗರಿಗೆ ಕುತೂಹಲ ಮೂಡಿರುತ್ತದೆ.ಕಾದಂಬರಿಯ ಒಳಪುಟಗಳಲ್ಲಿ ಕಣ್ಣಾಡಿಸಿದಂತೆ ಓದುಗರಿಗೆ ನಿರಾಶೆ ಎನಿಸದು.
ರಾಮಾಯಣ, ಮಹಾಭಾರತ ,ಭಗವದ್ಗೀತೆ  ಕೃತಿಗಳು ಭಾರತದ ಶ್ರೇಷ್ಠ ಮಾಹನ್ ಗ್ರಂಥಗಳು ಎಂಬುದರಲ್ಲಿ  ಸಂಶಯವಿಲ್ಲ ನಾವೆಲ್ಲರೂ ಈ ಗ್ರಂಥಗಳನ್ನು ದೈವಿಕ ಹಿನ್ನೆಲೆಯಲ್ಲಿ, ಪವಾಡಗಳ ಹಿನ್ನೆಲೆಯಲ್ಲಿ, ಧಾರ್ಮಿಕ, ಹಿನ್ನೆಲೆಯಲ್ಲಿ ಐತಿಹಾಸಿಕವಾದ ಹಿನ್ನೆಲೆಯಲ್ಲಿ ವಿವಿಧ ಲೇಖಕರು ,ಕವಿಗಳು ಬರೆದ ಮಹಾಭಾರತಗಳನ್ನು ಓದಿದ್ದೇವೆ ,ಪ್ರತಿ ಬಾರಿ ಮಹಾಭಾರತವನ್ನು ಓದುವಾಗ ರಸಸ್ವಾಧನೆ ,ಭಕ್ತಿ ರಸವನ್ನು ಸವಿದಿದ್ದೇವೆ .
ಪ್ರಸ್ತುತ ಕಾದಂಬರಿಯಲ್ಲಿ ಕಾದಂಬರಿಕಾರರು ಚಿತ್ತಿತವಾಗಿರುವ  ಮಾಹಭಾರತವನ್ನು  ನಾಸ್ತಿಕರು ಕೂಡ ಓದಿ ಮೆಚ್ಚುಗೆ ವ್ಯಕ್ತಪಡಿಸಿವರು. ಅಂದರೆ ಆಸ್ತಿಕರು ಇದನ್ನು ಸಂಪೂರ್ಣವಾಗಿ ತಿರಸ್ಕರಿಸಲು ಆಗದು .
ಈಗಾಗಲೇ ಕಾಂಡ ಕಾದಂಬರಿಯ ಮೂಲಕ ರಾಮಾಯಣದ ಕೆಲವು ಮಿತ್ ಗಳನ್ನು ಒಡೆಯುವ ಪ್ರಯತ್ನ ಮಾಡಿದ್ದ ಕಂ ನಾಡಿಗ ನಾರಾಯಣ ರವರು ಅದರ ಮುಂದುವರೆದ ಭಾಗ ಎಂಬಂತೆ ಮಹಾಭಾರತದ ಕಾದಂಬರಿ ದ್ವಾಪರ ನಮ್ಮ ಕೈಗಿತ್ತಿದ್ದಾರೆ. ಇಲ್ಲಿ ಕೃಷ್ಣ ಅತೀಂದ್ರಿಯ ಶಕ್ತಿ ಇರುವ ದೇವರಲ್ಲ ಸಮಾನ್ಯವಾದ ಮಾನವ, ಅವನು ಮಾಡಿರುವ ಚಮತ್ಕಾರ, ಸಾಧನೆ ,ಅತೀಂದ್ರಿಯ ಶಕ್ತಿ,, ಇವುಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡಿದ್ದಾರೆ.
ಕಾದಂಬರಿಕಾರರು ಮೊದಲ ಪುಟದಲ್ಲಿ ಹೇಳಿದಂತೆ ” ಇಲ್ಲಿ ಯಾವುದು ಹೊಸತಲ್ಲ,ಯಾವುದು ಹಳೆಯದಲ್ಲ, ಇಲ್ಲಿ ಯಾವುದೂ ಆರಂಭವಲ್ಲ, ಯಾವುದೂ ಅಂತ್ಯವೂ ಅಲ್ಲ, ಇಲ್ಲಿ ಯಾವದೂ ಶಾಶ್ವತವಲ್ಲ, ಅಶಾಶ್ವತವೂ ಅಲ್ಲ,, ಆದರೆ ನಿರಂತರ ಬದಲಾವಣೆಯೊಂದೆ ಶಾಶ್ವತ ” ಎನ್ನುವ ಮಾತು ಕಾದಂಬರಿ ಓದಿದಂತೆ ಸ್ಪಷ್ಟವಾಗಿ ಅರ್ಥವಾಗುತ್ತದೆ. ಕೆಲವು ಲೇಖಕರು ಕೆಲವರನ್ನು ಮಾತ್ರ ವಿಲನ್ ಆಗಿ ಚಿತ್ರಿಸಿದ್ದಾರೆ. ಇವರು ಆಗಲ್ಲ ಸುಯೋಧನ ಸಹ ಕೆಲ ಗುಣಗಳಲ್ಲಿ ಇತರರಿಗಿಂತ ಮೇಲು ಎಂಬುದನ್ನು ಚೆನ್ನಾಗಿ ಚಿತ್ರಿಸಿದ್ದಾರೆ.
ಮಹಾಭಾರತದಲ್ಲಿ ಕಥೆ ಹೇಳುವ ಬದಲುಪಾತ್ರಗಳೆ ಸ್ವಗತದಲಿ ಮಾತನಾಡುವ ತಂತ್ರದ ಮೂಲಕ ಕಥೆಯು ನಿರಂತರವಾಗಿ ಮುಂದುವರೆಯುವ ಕೌಶಲ್ಯ ಗಮನಸೆಳೆಯಿತುಗರ್ಭ, ಪ್ರಜ್ಞೆ,  ಖಾಂಡವ, ದಾಳ ,ಅಕ್ಷಯ, ಅಜ್ಞಾತ, ಸಂಧಾನ, ಜಯ, ಎಂಬ ವಿಭಾಗದಲ್ಲಿ ಕಾದಂಬರಿಯು ಮುಂದುವರೆಯುವುದು. ವ್ಯಾಸರಿಂದ ಆರಂಭವಾಗುವ ಕಾದಂಬರಿ ಸತ್ಯವತಿ, ಕುಂತಿ,ಗಾಂಧಾರಿ, ಭೀಷ್ಮ, ಪಾಂಡವರು ಕೌರವರು, ಕೃಷ್ಣ, ದ್ರೌಪದಿ ಇನ್ನೂ ಮುಂತಾದ ಎಲ್ಲಾ ಪಾತ್ರಗಳು ತಮ್ಮ ಅಂತರಾವಲೋಕನ ಮಾಡಿಕೊಂಡಂತೆ ನಮಗೆ ಭಾಸವಾಗುತ್ತದೆ.ಒಟ್ಟಿನಲ್ಲಿ ಕಾದಂಬರಿಯನ್ನು ಓದಿ ಮುಗಿಸಿದಾಗ ಮಹಾಭಾರತದ ಬಗ್ಗೆ ಅಲ್ಲಿಯ ಪಾತ್ರಗಳ ಬಗ್ಗೆ ನಮ್ಮಲ್ಲಿ ವಿಶ್ಲೇಷಣೆ ಆರಂಭವಾಗುವುದರಲ್ಲಿ ಸಂಶಯವಿಲ್ಲ.

ಕಾದಂಬರಿ: ದ್ವಾಪರ
ಲೇಖಕರು: ಕಂ ನಾಡಿಗ ನಾರಾಯಣ
ಪ್ರಕಾಶನ: ನವಕರ್ನಾಟಕ
ಬೆಲೆ: ೨೯೦

Leave a Reply