General

*ಉಳಿಸೋಣ ಸಂಬಂಧ*

ಸಿ ಜಿ ವೆಂಕಟೇಶ್ವರ, ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ , ಕ್ಯಾತಸಂದ್ರ, ತುಮಕೂರು

 ಬೆಸೆಯೋಣ ಬಂಧ
ಉಳಿಸೋಣ ಸಂಬಂಧ|ಪ|


ತೊಲಗಲಿ‌ ಬೇಸರ
ಎಲ್ಲರ ಮನದಲಿ
ತುಂಬಲಿ ಸಂತಸ
ಎಲ್ಲರ ಮನೆಯಲಿ|೧|


ರಸವಿರಲಿ ಮಾತಲಿ
ದ್ವೇಷವ ಮರೆಯೋಣ
ಸಮರಸವಿರಲಿ ನಮ್ಮಲಿ
ಸಹಬಾಳ್ವೆ ಮಾಡೋಣ|೨|


ಬೆಳೆಯಲಿ ಎಲ್ಲೆಡೆ
ಮಾನವೀಯ  ಮೌಲ್ಯಗಳು
ಉಳಿಯಲಿ ಕೌಟುಂಬಿಕ
ಸಿಹಿ ಸಂಬಂಧಗಳು|೩


ನಿಸ್ವಾರ್ಥ ,ಒಗ್ಗಟ್ಟು
ಎಲ್ಲರೂ ಪಾಲಿಸೋಣ
ಸುಂದರ ಕುಟುಂಬಕ್ಕೆ
ಬುನಾದಿ ಹಾಕೋಣ|೪| 

Leave a Reply