Showing 1–30 of 1160 results

೧೯ ಹಾಗೂ ೨೦ನೆಯ ಶತಮಾನದ ಬೆಳವಣಿಗೆಗಳು

ಟಿಪ್ಪು ಸುಲ್ತಾನನ ಮರಣಾನಂತರ ಬಂದ ಬ್ರಿಟಿಷ್‌ ಆಳ್ವಿಕೆಯು ಕರ್ನಾಟಕದಲ್ಲಿ ಹಲವಾರು ಬದಲಾವಣೆಗಳನ್ನು ತಂದಿತು.ಕನ್ನಡ ಮಾತನಾಡುವ ಸ್ಥಳಗಳನ್ನು ಹಲವಾರು ಸಣ್ಣ ಭಾಗಗಳಾಗಿ ವಿಂಗಡಿಸಿ, ಅವುಗಳನ್ನು ವಿವಿಧ ಆಡಳಿತಗಳಡಿಯಲ್ಲಿ ಇರಿಸಲಾಯಿತು.ಬ್ರಿಟಿಷರು ಮೈಸೂರನ್ನು ಪ್ರತ್ಯೇಕ ಆದರೆ ಕಡಿಮೆ ಪ್ರದೇಶವನ್ನುಳ್ಳ ಸಂಸ್ಥಾನವಾಗಿ ಉಳಿಸಿಕೊಂಡರು.ಕ್ರಿ.ಶ.1799ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರು ಸಿಂಹಾಸನವನ್ನು ಏರಿದಾಗ ಇನ್ನೂ ಬಾಲಕರಾಗಿದ್ದರು; ಆಧುನಿಕ ಜಿಲ್ಲೆಗಳಾದ ಗುಲ್ಬರ್ಗಾ, ರಾಯಚೂರು, ಕೊಪ್ಪಳ ಹಾಗೂ ಬೀದರ್‍ನ ಪ್ರದೇಶಗಳನ್ನು ಹೈದರಾಬಾದ್ ನಿಜಾಮ್‍ಗೆ ಹಸ್ತಾಂತರಗೊಳಿಸಲಾಯಿತು.ಕೆನರಾ ಜಿಲ್ಲೆ (ಈಗಿನ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳು) ಹಾಗೂ ಬಳ್ಳಾರಿಗಳನ್ನು ಟಿಪ್ಪುವಿನಿಂದ ತೆಗೆದುಕೊಂಡು, ಅದನ್ನು ಮದ್ರಾಸ್ ಪ್ರೆಸಿಡೆನ್ಸಿಗೆ ಸೇರ್ಪಡೆ ಮಾಡಲಾಯಿತು.ಕ್ರಿ.ಶ.1818ರಲ್ಲಿ ಪೇಶ್ವೆಯಿಂದ ಧಾರವಾಡ, ಗದಗ್, ಹಾವೇರಿ, ಬಿಜಾಪುರ, ಬಾಗಲಕೋಟೆ ಹಾಗೂ ಬೆಳಗಾವಿ ಜಿಲ್ಲೆಗಳನ್ನು ಬಾಂಬೆ ಪ್ರೆಸಿಡೆನ್ಸಿಯಲ್ಲಿ ವಿಲೀನಗೊಳಿಸಲಾಯಿತು.ಕ್ರಿ.ಶ.1862ರಲ್ಲಿ, ಕೆನರಾ ಜಿಲ್ಲೆಯನ್ನು ಇಬ್ಭಾಗಿಸಿ ಉತ್ತರ ಕೆನರಾವನ್ನು ಬಾಂಬೆ ಪ್ರೆಸಿಡೆನ್ಸಿಗೆ ಸೇರಿಸಿದರೆ, ದಕ್ಷಿಣ ಕೆನರಾ ಮದ್ರಾಸ್ ಪ್ರೆಸಿಡೆನ್ಸಿಯಲ್ಲೇ ಉಳಿಯಿತು.ಜೊತೆಗೆ, ಸವಣೂರಿನ ನವಾಬನೂ ಸೇರಿದಂತೆ, ಇತರ 15 ರಾಜಕುಮಾರರು ಸಣ್ಣ ಪುಟ್ಟ ಕನ್ನಡ ಸಂಸ್ಥಾನಗಳನ್ನು ಆಳಿದ್ದು, ಅವರಲ್ಲಿ ಅನೇಕರು ಮರಾಠ ಅರಸರಾಗಿದ್ದರು.ಅವುಗಳ ಪೈಕಿ ಜಮಖಂಡಿ, ಔಂಧ್, ರಾಮದುರ್ಗ, ಮುಧೋಳ್, ಸಂಡೂರು, ಹಿರೇ ಕುರುಂದವಾಡ್, ಜತ್, ಸಾಂಗ್ಲಿ, ಕೊಲ್ಹಾಪುರ್, ಮೀರಜ್, ಕಿರಿಯ ಕುರುಂದವಾಡ, ಅಕ್ಕಲಕೋಟೆ, ಮುಂತಾದವು ಮರಾಠ ರಾಜಕುಮಾರರ ನಿಯಂತ್ರಣಕ್ಕೆ ಒಳಪಟ್ಟಿದ್ದವು.

೧೯ನೇ ಶತಮಾನದ ಕರ್ನಾಟಕ ವಾಗ್ಗೇಯಕಾರರು

1399ರಲ್ಲಿ ಯದುರಾಯರಿಂದ ಸ್ಥಾಪಿಸಲ್ಪಟ್ಟ ಮೈಸೂರು ಒಡೆಯರ್‌ ರಾಜವಂಶಜರು ವಿಜಯನಗರ ಮತ್ತು ಕರ್ನಾಟಕದ ಪರಂಪರೆಗೆ ಉತ್ತರಾಧಿಕಾರಿಗಳಾದರು. ವಿಜಯನಗರದ ಪತನಾನಂತರ ಈ ವಂಶದ ರಾಜರು ಲಲಿತ ಕಲೆಗಳ ಪ್ರೇಮಿಗಳೂ, ಪೋಷಕರೂ ಆಗಿದ್ದರು. ತತ್ಪರಿಣಾಮವಾಗಿ ಸಂಗೀತ ಮತ್ತು ನೃತ್ಯ ಕಲೆಗಳ ಕೇಂದ್ರಗಳಲ್ಲಿ ಮೈಸೂರು ಒಂದು ಪ್ರಮುಖ ಕೇಂದ್ರವಾಯಿತು.

REDISCOVERING KARNATAKA

The road to Paradise begins in Karanataka and ends there.There is nowhere else to go. It is, as the poet says, cheluva Kannada Nadu. The word cheluva defies clear definition . It suggests beauty,grace,at-homeness.In Karnataka, a graceful girl is a cheluva, one who is pleasing, who radiates charm, contentment,peace.

ಅ.ನ.ಕೃಷ್ಣರಾಯರು

‘ನಾನು ತಮಿಳು ಕನ್ನಡಿಗ, ಮಿರ್ಜಾ ಇಸ್ಮಾಯಿಲರು ಮುಸ್ಲಿಂ ಕನ್ನಡಿಗರು, ಆದರೆ ಅ.ನ.ಕೃಷ್ಣರಾಯರು ಅಚ್ಚ ಕನ್ನಡಿಗರು. ‘ನಾನು ತಮಿಳು ಕನ್ನಡಿಗ, ಮಿರ್ಜಾ ಇಸ್ಮಾಯಿಲರು ಮುಸ್ಲಿಂ ಕನ್ನಡಿಗರು, ಆದರೆ ಅ.ನ.ಕೃಷ್ಣರಾಯರು ಅಚ್ಚ ಕನ್ನಡಿಗರು.

ಅಕ್ಟೇವಿಯಾ ಪಾಜ್

ಅಕ್ಟೇವಿಯಾ ಪಾಜ್ ಮಾರ್ಚ್‌ ೩೧-೧೯೧೪ರಲ್ಲಿ ಮೆಕ್ಸಿಕೋ ನಗರದಲ್ಲಿ ಹುಟ್ಟಿದನು. ಅವನ ತಾತ ಹೆಸರಾಂತ ಪತ್ರಿಕೋದ್ಯಮಿ. ಅಕ್ಟೇವಿಯಾ ಪಾಜ್ ಮಾರ್ಚ್‌ ೩೧-೧೯೧೪ರಲ್ಲಿ ಮೆಕ್ಸಿಕೋ ನಗರದಲ್ಲಿ ಹುಟ್ಟಿದನು. ಅವನ ತಾತ ಹೆಸರಾಂತ ಪತ್ರಿಕೋದ್ಯಮಿ.

ಅಂಚೆ ಚೀಟಿಗಳಲ್ಲಿ ಆರೋಗ್ಯ

ಅಂಚೆ ಚೀಟಿಗಳ ಸಂಗ್ರಹಣೆ ಒಂದು ಉತ್ತಮ ಹವ್ಯಾಸವೆಂದು ಎಲ್ಲರಿಗೂ ತಿಳಿದಿರುವ ವಿಷಯವೇ ಹೌದು. ಆದರೆ ಈ ಹವ್ಯಾಸಕ್ಕೆ ಹವ್ಯಾಸಗಳ ರಾಜ

ಅಂಚೆ ಜಾನಪದ

ಬಣ್ಣಬಣ್ಣದ ಚಿಟ್ಟೆಗಳು, ಬೃಹದಾಕಾರದ ಆಮೆ, ಮಿಶ್ರವರ್ಣದ ಹಾವುಗಳು, ಎಮ್ಮೆ, ಎತ್ತು, ಬೆಕ್ಕು, ಹುಲಿ, ಜಿಂಕೆಗಳು ಭಾರತದ ಅಸಂಖ್ಯಾತ ಜೀವರಾಶಿಗಳ ಭಾಗ. ಸೃಷ್ಟಿಯಲ್ಲಿ ಪ್ರಾಣಿ ಪಕ್ಷಿಗಳಲ್ಲಿ ಹೇಗೆ ಲೆಕ್ಕವಿಲ್ಲದಷ್ಟು ಜಾತಿಗಳಿವೆಯೋ ಹಾಗೆ ಕ್ರಿಮಿಕೀಟಗಳೂ ಲೆಕ್ಕವಿಲ್ಲದಷ್ಟಿವೆ. ಇವನ್ನು ಕಾಡಿನಲ್ಲೂ ಕಾಣಬಹುದು ನಾಡಿನಲ್ಲೂ ನೋಡಬಹುದು. ಇವುಗಳ ಆಕಾರ, ಬಣ್ಣ ವಿಚಿತ್ರವಾಗಿರುತ್ತವೆ.

ಅತಿಮಾನುಷ ಕತೆಗಳು

ಒಂದು ಊರಿನಲ್ಲಿ ಒಬ್ಬ ದೊರೆ. ಅವನ ಹೆಸರು ಕಪಿನ ರಾಜ ಎಂದು. ಅವನಿಗೆ ಏಳು ಗಂಡು ಮಕ್ಕಳು ಇದ್ದರು. ಅವರಲ್ಲಿ ಆರು ಜನಕ್ಕೆ ಲಗ್ನ ಆಗಿತ್ತು. ಆ ದೊರೆಗೆ ಒಬ್ಬ ಮಂತ್ರಿ. ಒಂದು ಊರಿನಲ್ಲಿ ಒಬ್ಬ ದೊರೆ. ಅವನ ಹೆಸರು ಕಪಿನ ರಾಜ ಎಂದು. ಅವನಿಗೆ ಏಳು ಗಂಡು ಮಕ್ಕಳು ಇದ್ದರು. ಅವರಲ್ಲಿ ಆರು ಜನಕ್ಕೆ ಲಗ್ನ ಆಗಿತ್ತು. ಆ ದೊರೆಗೆ ಒಬ್ಬ ಮಂತ್ರಿ.

ಅನಂತದ ಕಡೆಗೆ ಚಿಂತನೆ ಶ್ರೇಣಿ-೧

ಅಗೋ ನೋಡು! ಶರದೃತುವಿನ ಸುಂದರ ನಿರ್ಮಲ ಆಕಾಶ. ಅಗೋ ನೋಡು! ಶರದೃತುವಿನ ಸುಂದರ ನಿರ್ಮಲ ಆಕಾಶ.

ಅನಂತದ ಕಡೆಗೆ ಚಿಂತನೆ ಶ್ರೇಣಿ-೨

ಅಗಣಿತ ತಾರೆಗಳ ಕಂಗಳ ತೆರೆಯುತ ನೀ ನನ್ನತ್ತ ಅಗಣಿತ ತಾರೆಗಳ ಕಂಗಳ ತೆರೆಯುತ ನೀ ನನ್ನತ್ತ

ಅನನ್ಯ

ಎ.ಎನ್‌.ಮರ್ತಿರಾಯರ ಎರಡು ಕೃತಿಗಳಲ್ಲಿ ಹರಳುಗಟ್ಟಿರುವ ವಿಮರ್ಶೆಯ ಅನನ್ಯತೆಯ ಸ್ವರೂಪವನ್ನು ಮೆಚ್ಚಿ, ಬಿಚ್ಚಳಿಸುವುದು, ಧ್ಯಾನಿಸುವುದು ಈ ಲೇಖನದ ಉದ್ದೇಶ. ಎ.ಎನ್‌.ಮರ್ತಿರಾಯರ ಎರಡು ಕೃತಿಗಳಲ್ಲಿ ಹರಳುಗಟ್ಟಿರುವ ವಿಮರ್ಶೆಯ ಅನನ್ಯತೆಯ ಸ್ವರೂಪವನ್ನು ಮೆಚ್ಚಿ, ಬಿಚ್ಚಳಿಸುವುದು, ಧ್ಯಾನಿಸುವುದು ಈ ಲೇಖನದ ಉದ್ದೇಶ.

ಅನಾಥಪಕ್ಷಿ

ನಾನು ಹುಟ್ಟುವುದಕ್ಕಿಂತ ಮುಂಚೆಯೇ ನನ್ನ ತಂದೆ ತಾಯಿಗಳು ಸತ್ತುಹೋಗಿದ್ದರು. ಹುಟ್ಟುವುದಕ್ಕಿಂತ ಮುಂಚೆಯೇ ತಾಯಿ ಕೂಡ ಹೇಗೆ ಸಾಯುತ್ತಾಳೆಂದು ಕೆಲವರಿಗೆ ಅನುಮಾನ ತಟ್ಟಬಹುದು. ಆಕೆಯನ್ನು ಮದರಾಸು ಜನರಲ್‌ ಆಸ್ಪತ್ರೆಯಲ್ಲಿ ಸೇರಿಸಿದ್ದರಂತೆ. ಆಗ ಆಕೆ ತುಂಬು ಗರ್ಭಿಣಿ. ಒಂಬತ್ತು ತಿಂಗಳೂ ತುಂಬಿದ್ದುವು. ಹೆರಿಗೆಗೆಂದೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರಂತೆ. ನಾನು ಹುಟ್ಟುವುದಕ್ಕಿಂತ ಮುಂಚೆಯೇ ನನ್ನ ತಂದೆ ತಾಯಿಗಳು ಸತ್ತುಹೋಗಿದ್ದರು. ಹುಟ್ಟುವುದಕ್ಕಿಂತ ಮುಂಚೆಯೇ ತಾಯಿ ಕೂಡ ಹೇಗೆ ಸಾಯುತ್ತಾಳೆಂದು ಕೆಲವರಿಗೆ ಅನುಮಾನ ತಟ್ಟಬಹುದು. ಆಕೆಯನ್ನು ಮದರಾಸು ಜನರಲ್‌ ಆಸ್ಪತ್ರೆಯಲ್ಲಿ ಸೇರಿಸಿದ್ದರಂತೆ. ಆಗ ಆಕೆ ತುಂಬು ಗರ್ಭಿಣಿ. ಒಂಬತ್ತು ತಿಂಗಳೂ ತುಂಬಿದ್ದುವು. ಹೆರಿಗೆಗೆಂದೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರಂತೆ.

ಅನುಭವದ ಅಮೃತತ್ವ

ಕನ್ನಡ ಸಾಹಿತ್ಯ ಚರಿತ್ರೆಯು ಸಾವಿರಾರು ವರ್ಷಗಳಿಂದ ತನ್ನಲ್ಲಿ ಹೊತ್ತು ತಂದ ವಿಫುಲ ಸಾಹಿತ್ಯದಿಂದ ಮಹತ್ವ ಪಡೆದಿದೆ. ಕನ್ನಡ ಸಾಹಿತ್ಯ ಚರಿತ್ರೆಯು ಸಾವಿರಾರು ವರ್ಷಗಳಿಂದ ತನ್ನಲ್ಲಿ ಹೊತ್ತು ತಂದ ವಿಫುಲ ಸಾಹಿತ್ಯದಿಂದ ಮಹತ್ವ ಪಡೆದಿದೆ.

ಅನೇಕಾಂತವಾದ

ಈ ಜಗತ್ತು ಅತ್ಯಂತ ವಿಶಾಲ. ಇಲ್ಲಿ ಇರುವ ವಸ್ತುಗಳು ಅನೇಕ ; ವಿವಿಧ ವರ್ಗಕ್ಕೆ ಸೇರಿದವು. ಇಲ್ಲಿರುವ ಜೀವಿಗಳ ಸಂಖ್ಯೆ ಅಪಾರ. ಅವೂ ವಿವಿಧ ಜಾತಿಗೆ ಸೇರಿದವು. ಇವೆಲ್ಲವನ್ನೂ ಅರ್ಥಮಾಡಿಕೊಳ್ಳುವ ಮನುಷ್ಯರಲ್ಲೂ ಎಷ್ಟೊಂದು ಜಾತಿ, ವರ್ಗ, ವರ್ಣ ಭೇದಗಳು! ಈ ಮನುಷ್ಯರನ್ನು ಅರ್ಥಮಾಡಿಕೊಳ್ಳುವ ದೃಷ್ಟಿಯಲ್ಲೂ ವೈವಿಧ್ಯ ಎಂತಹುದು!

ಅಪಸ್ವರ-ಅಪಜಯ

ಜಟಿಕ ಗಾಡಿಯೊಂದು ಚಾಮರಾಜಪೇಟೆ ರಸ್ತೆಯಲ್ಲಿ ನಿಧಾನವಾಗಿ ಹೋಗುತ್ತಿತ್ತು. ಗಾಡಿಗೆ ಬಡಕಲು ಮೈಯ ಸೊರಗಿದ ಕುದುರೆಯೊಂದನ್ನು ಕಟ್ಟಿತ್ತು. ಜಟಕಾ ಸಾಬಿ ಆರಾಮವಾಗಿ ಸಿಳ್ಳೆ ಹಾಕುತ್ತ ಕುದುರೆಯನ್ನು ಮೆಲ್ಲಗೆ ಓಡಿಸುತ್ತಿದ್ದ. “ಬೇಗ ಗಾಡಿ ಹೊಡಿ ಸಾಬ್‌. ಆಮೇಲೆ ನಮಗೆ ಟ್ರೈನು ತಪ್ಪಿ ಹೋದೀತು.” ಒಳಗಿನಿಂದ ಗೊಗ್ಗರ ದನಿಯೊಂದು ಆನಂದದಲ್ಲಿ ಮೈಮರೆತಿದ್ದ ಸಾಬಿಯನ್ನು ಎಚ್ಚರಿಸಿತು.

ಅಪೂರ್ಣ ವರ್ತಮಾನಕಾಲ

ಭಾಂಡಾರಕಾರ ಗ್ರಂಥಮಾಲೆಯು ಪ್ರಕಟಿಸಿದ ‘ದೀವಿಗೆ’ ಎಂಬ ಪೈಸ್ಮೃತಿ ಗ್ರಂಥದಿಂದ (೧೯೬೪) ಗೋಚಿಂದ ಪೈಗಳ ಬಗ್ಗೆ ತಿಳಿಯುವ ಸಂಗತಿಗಳು ಹೀಗಿವೆ. ಭಾಂಡಾರಕಾರ ಗ್ರಂಥಮಾಲೆಯು ಪ್ರಕಟಿಸಿದ ‘ದೀವಿಗೆ’ ಎಂಬ ಪೈಸ್ಮೃತಿ ಗ್ರಂಥದಿಂದ (೧೯೬೪) ಗೋಚಿಂದ ಪೈಗಳ ಬಗ್ಗೆ ತಿಳಿಯುವ ಸಂಗತಿಗಳು ಹೀಗಿವೆ.

ಅಬೆ ದುಬೊಅ

ಭಾರತದೇಶ ವಿಶ್ವ ಜಾನಪದದ ತವರು.ಮೊಗೆದಷ್ಟೂ ತುಂಬಿ ತುಳುಕುವ ಸಮೃದ್ಧ ಸಾಗರ ಭಾರತದೇಶ ವಿಶ್ವ ಜಾನಪದದ ತವರು.ಮೊಗೆದಷ್ಟೂ ತುಂಬಿ ತುಳುಕುವ ಸಮೃದ್ಧ ಸಾಗರ

ಅಬ್ದುಲ್ಲಸಾಬ ಅಣ್ಣಿಗೇರಿ

ಕರ್ನಾಟಕದ ಸಾಂಸ್ಕೃತಿಕ ಶ್ರೀಮಂತಿಕೆಗೆ ಸಾಕ್ಷಿಯಾಗಿ ಹಲವಾರು ಕಲಾಪ್ರಕಾರಗಳು ಪ್ರಾಚೀನ ಕಾಲದಿಂದಲೂ ಮೈತಳೆದು ನಿಂತಿವೆ. ಸಾಹಿತ್ಯ, ಸಂಗೀತ, ಶಿಲ್ಪಕಲೆ, ಚಿತ್ರಕಲೆ, ರಂಗಭೂಮಿ ಮುಂತಾದ ಹಲವಾರು ಕಲಾ ಪರಂಪರೆಗೆ ಜನ್ಮ ನೀಡಿದ ಶ್ರೇಯಸ್ಸು ನಮ್ಮ ನಾಡಿನದು. ರಂಗಭೂಮಿ, ಅದರಲ್ಲಿಯೂ ವೃತ್ತಿರಂಗಭೂಮಿ ಕನ್ನಡದ ಸಾಂಸ್ಕೃತಿಕ ವೈಭವಕ್ಕೆ ನೀಡಿದ ಕೊಡುಗೆ ಅಪಾರ.

ಅಭಿನಯ ವಿಶಾರದೆ ಮಳವಳ್ಳಿ ಸುಂದರಮ್ಮನವರ ಆತ್ಮಕಥೆ

ಕನ್ನಡ ರಂಗಭೂಮಿಗೆ ನಾನು ಪದಾರ್ಪಣ ಮಾಡಿ ಆರು ದಶಕಗಳು ಜಾರಿ ಹೋಗಿವೆ. ಈ ಆರು ದಶಕಗಳ ಬಣ್ಣದ ಬದುಕಿನಲ್ಲಿ ಅನೇಕ ಕಷ್ಟಕೋಟಲೆಗಳನ್ನು ಅನುಭವಿಸಿದ್ದೇನೆ. ರಂಗಭೂಮಿಯ ಏಳುಬೀಳುಗಳನ್ನು ಕಂಡಿದ್ದೇನೆ. ಅನೇಕ ಪ್ರತಿಭಾನ್ವಿತ ಅಭಿನೇತ್ರಿಯರೂ, ಕಲಾತಪಸ್ವಿಗಳೂ ಕನ್ನಡ ರಂಗಕಲೆಯನ್ನು ಪ್ರಜ್ವಲಗೊಳಿಸಿದ್ದನ್ನು ಕಂಡಿದ್ದೇನೆ.

ಅರಣ್ಯ

ಶೀನಾ ಸಿದ್ದಿ ಜತೆ ಕಾಡು ಅಲೆಯುತ್ತಿದ್ದೆ. ಪಕ್ಷಿಯ ಕೂಗು ಆಲಿಸಿದೆ. ಅದು ಕಾಜಾಣ ಎಂದು ತಟ್ಟನೆ ತಿಳಿಯಿತು. ಆದರೆ ವನವಾಸಿ ಶೀನು ‘ಕಾಟಾಕ್ವಯ್‌’ ಎಂದು ಅದನ್ನು ತಮ್ಮದೇ ಹೆಸರಿನಿಂದ ಗುರುತಿಸಿದರು ! ಕೂಗುವ ಸ್ವರ ಆಧರಿಸಿ ಪಕ್ಷಿಗೆ ವನವಾಸಿ ಲೋಕ ಇಟ್ಟ ಗ್ರಾಮ್ಯ ಹೆಸರು. ಮರಕುಟುಕವನ್ನು ಕುಟುಂಬ, ಮಳೆ ಜಿರಲೆಗೆ ‘ವಯ್‌ವಯ್‌ರೇ’ ಎಂದು ಹೊಸ ಶಬ್ದ ಓದಿಸಿದರು.

ಅರಮನೆ

ವಾರದ ಹಿಂದೆಯಷ್ಟೆ ಬೆಳಗುಪ್ಪದ ಜಮಿಂದಾ‍‍‍‍ರ‍್ರುಚಿನ್ನೋಬುಳ ರೆಡ್ಡಿಯನ್ನೂ, ಮರ್ಷೂರು ಮಾದಿರೆಡ್ಡಿಯನ್ನೂ ಯೇಕಕಾಲಕ್ಕೆ ಮಣಿಸಿ ಕಡುಪಾದ ವಸ್ತಿವಳಗ ತನ್ನ ಸರೀರದ ಮ್ಯಾಲಿದ್ದ ಪೋಷಾಕನ್ನು ಕಳಚಿ ಕಲೆಟ್ರುಥಾಮಸು ಮನ್ರೋ ಸಾಹೇಬನು ಯದುರಿದ್ದ ನಿಲುಗನ್ನಡಿಯಲ್ಲಿ ನೋಡಿಕೊಳ್ಳುತ ತನ್ನ ಪ್ರತಿಬಿಂಬವನ್ನು ತಾನು ಮೋಹಿಸಿಕೊಳ್ಳುತ್ತಿರುವಾಗ್ಗೆ.. ವಾರದ ಹಿಂದೆಯಷ್ಟೆ ಬೆಳಗುಪ್ಪದ ಜಮಿಂದಾ‍‍‍‍ರ‍್ರುಚಿನ್ನೋಬುಳ ರೆಡ್ಡಿಯನ್ನೂ, ಮರ್ಷೂರು ಮಾದಿರೆಡ್ಡಿಯನ್ನೂ ಯೇಕಕಾಲಕ್ಕೆ ಮಣಿಸಿ ಕಡುಪಾದ ವಸ್ತಿವಳಗ ತನ್ನ ಸರೀರದ ಮ್ಯಾಲಿದ್ದ ಪೋಷಾಕನ್ನು ಕಳಚಿ ಕಲೆಟ್ರುಥಾಮಸು ಮನ್ರೋ ಸಾಹೇಬನು ಯದುರಿದ್ದ ನಿಲುಗನ್ನಡಿಯಲ್ಲಿ ನೋಡಿಕೊಳ್ಳುತ ತನ್ನ ಪ್ರತಿಬಿಂಬವನ್ನು ತಾನು ಮೋಹಿಸಿಕೊಳ್ಳುತ್ತಿರುವಾಗ್ಗೆ..

ಅರವಿಂದ ಮಾಲಗತ್ತಿ ಅವರ ಆಯ್ದ ಕವಿತೆಗಳು

ಕನ್ನಡ ಕಾವ್ಯದ ಇಂದಿನ ಸನ್ನಿವೇಶದಲ್ಲಿ ಪ್ರವೇಶ ಬಿಂದುಗಳು ಅನೇಕ. ಇವು ಆಯಾ ಕವಿಯ ತಾತ್ವಿಕತೆಯ ಸ್ವರೂಪದಿಂದ ತೀರ್ಮಾನವಾಗಿತ್ತಿವೆಯೇ ವಿನಾ ಆಕೃತಿ ಸಂಬಂಧಿಯಾದ ವಿಷಯಗಳಿಂದ ಅಲ್ಲ. ಕೊನೆಗೂ ಮುಖ್ಯವಾಗುವುದು, ಇಪ್ಪತ್ತೊಂದನೆಯ ಶತಮಾನದಲ್ಲಿ ಖಚಿತವಾದ ಆಕಾರಗಳನ್ನು ಪಡೆಯುತ್ತಿರುವ ನವ ಆಧುನಿಕತೆಯ ಸವಾಲುಗಳನ್ನು ಕವಿಯು ಎದುರಿಸುವ ಬಗೆಯೇ ಆಗಿದೆ. ಇಂಥ ಅನುಸಂಧಾನವು, ಗತ ಮತ್ತು ಪ್ರಸ್ತುತಗಳ ನಡುವೆ ಮಾಡಿಕೊಳ್ಳುವ ಆಯ್ಕೆಯು ತಂತಿಯ ಮೇಲಿನ ನಡಿಗೆಯೆನ್ನುವುದರಲ್ಲಿ ಅನುಮಾನವಿಲ್ಲ.