Blog
*ರಕ್ಷಕರು*
ರಕ್ಷಕರು ನಾವು
ಆರಕ್ಷಕರು ನಾವು||
ಕಣ್ಣಿಗೆ ಕಾಣುವ ಕಳ್ಳರ
ದುರುಳರ ಹಿಡಿಯುವೆವು
ಕಣ್ಣಿಗೆ ಕಾಣದ ಅಣುಗಳ
ಮಣಿಸಲು ಹೋರಾಡುವೆವು||
ಹಗಲಿರುಳೆನ್ನದೆ ಜನಗಳ
ಸೇವೆಗೆ ಸಿದ್ದರು ನಾವು
ಕಾನೂನು ಸುವ್ಯವಸ್ಥೆ
ಕಾಪಾಡಲು ಬದ್ದರು ನಾವು||
ವೈರಾಣು ಮಣಿಸಲು
ಮನೆಯನು ತೊರೆದಿಹೆವು
ನಮ್ಮನೆ ಹೊಸ್ತಿಲಿ ನಿಂತು
ಹೆಂಡತಿ ಮಕ್ಕಳ ನೋಡುವೆವು.||
ತ್ಯಾಗವ ಮಾಡಿರುವೆವು ನಮ್ಮ
ಸುಖವ ನಿಮ್ಮೊಳಿತಿಗೆ
ಕೈ ಜೋಡಿಸಿ ನಮ್ಮೊಂದಿಗೆ
ನೀವು ಸಕಲರ ಒಳಿತಿಗೆ.||
ಸಿ.ಜಿ.ವೆಂಕಟೇಶ್ವರ, ಸಮಾಜ ವಿಜ್ಞಾನ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಕ್ಯಾತಸಂದ್ರ, ತುಮಕೂರು